ತನ್ನದೇ ಗ್ರಹಗಳನ್ನು ಕಬಳಿಸುವ ನಕ್ಷತ್ರ ಪತ್ತೆ

Update: 2017-10-13 17:08 GMT

ನ್ಯೂಯಾರ್ಕ್, ಅ. 13: ಭೂಮಿಯಿಂದ 350 ಜ್ಯೋತಿ ವರ್ಷಗಳಷ್ಟು ದೂರದಲ್ಲಿ ಸೂರ್ಯನಂಥ ನಕ್ಷತ್ರವೊಂದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

 ಇದು ಗ್ರಹಗಳನ್ನು ಕಬಳಿಸುವ ನಕ್ಷತ್ರವಾಗಿದ್ದು, ಈಗಾಗಲೇ ಭೂಮಿ ಮಾದರಿಯ 15 ಗ್ರಹಗಳನ್ನು ನುಂಗಿ ಹಾಕಿದೆ.

ಈ ಗ್ರಹಕ್ಕೆ ಗ್ರೀಕ್ ಪುರಾಣಗಳಲ್ಲಿ ಬರುವ 12 ಟೈಟಾನ್‌ಗಳ ಪೈಕಿ ಒಂದಾಗಿರುವ ಮಕ್ಕಳನ್ನು ತಿನ್ನುವ ‘ಕ್ರೋನೊಸ್’ನ ಹೆಸರನ್ನು ಇಡಲಾಗಿದೆ.

 ಈ ನಕ್ಷತ್ರವು ಅತ್ಯಂತ ಪ್ರಕಾಶಮಾನವಾಗಿದೆ ಹಾಗೂ ತನ್ನದೇ ಗ್ರಹಗಳನ್ನು ಕಬಳಿಸುವ ನಕ್ಷತ್ರಗಳಿಗೆ ಅತ್ಯಂತ ನಾಟಕೀಯ ಉದಾಹರಣೆಯಾಗಿದೆ ಎಂದು ನ್ಯೂಜರ್ಸಿಯ ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದ ಖಭೌತ ವಿಜ್ಞಾನಿ ಹಾಗೂ ಅಧ್ಯಯನದ ಪ್ರಧಾನ ಲೇಖಕ ಸೆಮ್‌ಯಾಂಗ್ ಓಹ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News