ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಮೆಕ್ಸಿಕೊ

Update: 2017-10-13 18:26 GMT

ಗುವಾಹತಿ, ಅ.13: ಎರಡು ಬಾರಿಯ ಚಾಂಪಿಯನ್ ಮೆಕ್ಸಿಕೊ ಪ್ರಸ್ತುತ ಅಂಡರ್-17 ವಿಶ್ವಕಪ್‌ನಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಶನಿವಾರ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವಿಗಾಗಿ ಪರದಾಡುತ್ತಿರುವ ಚಿಲಿ ತಂಡವನ್ನು ಎದುರಿಸಲಿದೆ.

ಮೆಕ್ಸಿಕೊ ಎರಡು ಪಂದ್ಯಗಳಲ್ಲಿ ಕೇವಲ ಒಂದು ಅಂಕ ಗಳಿಸಿದೆ. ಮೊದಲ ಪಂದ್ಯದಲ್ಲಿ ಇರಾಕ್ ವಿರುದ್ಧ ಡ್ರಾ ಸಾಧಿಸಿರುವ ಮೆಕ್ಸಿಕೊ 2ನೆ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 2-3 ರಿಂದ ಸೋತಿತ್ತು. ಅಂತಿಮ-16ರ ಸುತ್ತಿಗೇರಬೇಕಾದರೆ ಚಿಲಿ ತಂಡವನ್ನು ಮಣಿಸಲೇಬೇಕಾಗಿದೆ. ಚಿಲಿಯನ್ನು ಮಣಿಸಿದರೆ ಮೆಕ್ಸಿಕೊ 4 ಅಂಕ ಗಳಿಸಲಿದೆ. 2 ಅಥವಾ 3ನೆ ಸ್ಥಾನ ಪಡೆಯಲಿದೆ. ಮೆಕ್ಸಿಕೊ ಯಾವ ಸ್ಥಾನ ಪಡೆಯಲಿದೆ ಎನ್ನುವುದು ಇಂಗ್ಲೆಂಡ್-ಇರಾಕ್ ನಡುವಿನ ಪಂದ್ಯವನ್ನು ಆಧರಿಸಿದೆ. ಚಿಲಿ ತಂಡ ಆಡಿರುವ 2 ಪಂದ್ಯಗಳಲ್ಲಿ ಸೋತಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ನ ವಿರುದ್ಧ 0-4 ರಿಂದ ಸೋತಿದ್ದ ಚಿಲಿ ಎರಡನೆ ಪಂದ್ಯದಲ್ಲಿ ಇರಾಕ್ ವಿರುದ್ಧ 0-3 ರಿಂದ ಸೋತಿತ್ತು.

ಸತತ 3ನೆ ಗೆಲುವಿನತ್ತ ಫ್ರಾನ್ಸ್ ಚಿತ್ತ: ಈಗಾಗಲೇ ನಾಕೌಟ್ ಹಂತಕ್ಕೆ ತೇರ್ಗಡೆಯಾಗಿರುವ ಯುರೋಪ್‌ನ ಬಲಿಷ್ಠ ತಂಡ ಫ್ರಾನ್ಸ್ ‘ಇ’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಹೊಂಡುರಾಸ್ ತಂಡವನ್ನು ಎದುರಿಸಲಿದೆ. ತನ್ನ ಮೊದಲ ಪಂದ್ಯದಲ್ಲಿ ಕ್ಯಾಲೆಡೋನಿಯ ವಿರುದ್ಧ 7-1 ಹಾಗೂ 2ನೆ ಪಂದ್ಯದಲ್ಲಿ ಜಪಾನ್ ವಿರುದ್ಧ 2-1 ರಿಂದ ಗೆಲುವು ಸಾಧಿಸಿರುವ ಫ್ರಾನ್ಸ್ ಈಗಾಗಲೇ ಪ್ರಿ-ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. ಫ್ರಾನ್ಸ್ ಶನಿವಾರ ಜಪಾನ್ ತಂಡವನ್ನು ಮಣಿಸಿ‘ಇ’ ಗುಂಪಿನಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳು ವಿಶ್ವಾಸದಲ್ಲಿದೆ.

ಫ್ರಾನ್ಸ್‌ನ ಅಮಿನ್ ಗೌರಿ 2 ಪಂದ್ಯಗಳಲ್ಲಿ 4 ಗೋಲುಗಳನ್ನು ಬಾರಿಸಿ ಭರ್ಜರಿ ಫಾರ್ಮ್ ನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News