ಗೋಮಾಂಸ ಸಾಗಿಸಿದ ಆರೋಪ: ಗೋರಕ್ಷಕರಿಂದ ಐವರಿಗೆ ಥಳಿತ
Update: 2017-10-14 22:03 IST
ಫರೀದಾಬಾದ್, ಅ. 14: ಗೋಮಾಂಸ ಸಾಗಿಸುತ್ತಿದ್ದ ಆರೋಪದಲ್ಲಿ ಫರೀದಾಬಾದ್‌ನಲ್ಲಿ ಶನಿವಾರ ಸ್ವಘೋಷಿತ ಗೋ ರಕ್ಷಕರು ಐದು ಮಂದಿ ಮೇಲೆ ಹಲ್ಲೆ ನಡೆಸಿದ್ದಾರೆ.
ಗೋರಕ್ಷಕರು ಆಟೊ ಚಾಲಕನಿಗೂ ಥಳಿಸಿದ್ದು, ಜೈ ಹನುಮಾನ್ ಎಂದು ಘೋಷಣೆಗಳನ್ನು ಕೂಗುತ್ತಾ ಹೋಗಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಆದಾಗ್ಯೂ, ಗೋಮಾಂಸ ಸಾಗಿಸಿದ ಆರೋಪದಲ್ಲಿ ಸಂತ್ರಸ್ತ 5 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ, ಗೋರಕ್ಷಕರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಅದು ವರದಿ ಮಾಡಿದೆ.
ಗೋರಕ್ಷಕರಿಂದ ನಡೆಯುತ್ತಿರುವ ಹಲ್ಲೆಯ ಘಟನೆಗಳನ್ನು ತಡೆಯಲು ಪ್ರತಿ ಜಿಲ್ಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು ಎಂದು ಕಳೆದ ತಿಂಗಳು ಸುಪ್ರೀಂ ಕೋರ್ಟ್ ಎಲ್ಲ ರಾಜ್ಯ ಸರಕಾರಗಳಿಗೆ ನಿರ್ದೇಶಿಸಿತ್ತು.