ಭಾರತ ಮೂಲದ ತರುಣ ಬ್ರಿಟನ್‌ನ ಕಿರಿಯ ಮಿಲಿಯಾಧೀಶ

Update: 2017-10-16 16:47 GMT

ಲಂಡನ್, ಅ. 16: ಭಾರತ ಮೂಲದ ಹದಿಹರೆಯದ ವ್ಯಕ್ತಿಯೊಬ್ಬರು ಬ್ರಿಟನ್‌ನ ಅತಿ ಕಿರಿಯ ಮಿಲಿಯಾಧೀಶರಾಗಿ ಹೊರಹೊಮ್ಮಿದ್ದಾರೆ. ಅವರು ಆರಂಭಿಸಿರುವ ಆನ್‌ಲೈನ್ ಎಸ್ಟೇಟ್ (ಭೂ ಮಾರಾಟ) ವ್ಯವಹಾರವು ಕೇವಲ ಒಂದೇ ವರ್ಷದಲ್ಲಿ 12 ಮಿಲಿಯ ಪೌಂಡ್ (ಸುಮಾರು 103 ಕೋಟಿ ರೂಪಾಯಿ) ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ.

19 ವರ್ಷದ ಅಕ್ಷಯ್ ರೂಪರೇಲಿ ತನ್ನ ಕಾಲೇಜು ಶಿಕ್ಷಣದ ಜೊತೆಗೆ ಭೂವ್ಯವಹಾರವನ್ನೂ ಮಾಡಿದರು. ಅವರು ತಾನು ಮಾರಾಟ ಮಾಡುವ ಆಸ್ತಿಗಳಿಗೆ ಕ್ಷೇತ್ರದಲ್ಲಿ ನೆಲೆಯೂರಿರುವ ರಿಯಲ್ ಎಸ್ಟೇಟ್ ಏಜಂಟ್‌ಗಳು ವಿಧಿಸುವ ಬೆಲೆಗಿಂತ ತುಂಬಾ ಕಡಿಮೆ ಬೆಲೆ ವಿಧಿಸುತ್ತಿದ್ದರು.

ಅವರ ಈ ವಾರ ಬ್ರಿಟನ್‌ನ 18ನೆ ಅತಿ ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ಕೇವಲ 16 ತಿಂಗಳ ಹಿಂದೆಯಷ್ಟೇ ಅವರು ತನ್ನ ಉದ್ಯಮವನ್ನು ಆರಂಭಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News