ಸೊಮಾಲಿಯ ಟ್ರಕ್ ಬಾಂಬ್ ದಾಳಿ: 300 ದಾಟಿದ ಮೃತರ ಸಂಖ್ಯೆ

Update: 2017-10-16 17:35 GMT

ಮೊಗಾದಿಶು (ಸೊಮಾಲಿಯ), ಅ. 16: ಸೊಮಾಲಿಯ ರಾಜಧಾನಿ ಮೊಗಾದಿಶುವಿನಲ್ಲಿ ಶನಿವಾರ ನಡೆದ ಟ್ರಕ್ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 300ನ್ನು ದಾಟಿದೆ ಎಂದು ಆ್ಯಂಬುಲೆನ್ಸ್ ಸೇವೆಯ ನಿರ್ದೇಶಕರು ಸೋಮವಾರ ಹೇಳಿದ್ದಾರೆ.

ಸ್ಫೋಟದ ವೇಳೆ ಅನುಭವಿಸಿದ ಗಾಯಗಳಿಂದಾಗಿ ಕಳೆದ ಕೆಲವು ಗಂಟೆಗಳಲ್ಲಿ ಹಲವಾರು ಮಂದಿ ಕೊನೆಯುಸಿರೆಳೆದಿದ್ದಾರೆ ಎಂದು ನಿರ್ದೇಶಕ ಡಾ. ಅಬ್ದುಲ್‌ಕಾದಿರ್ ಆದಂ ತಿಳಿಸಿದರು.

ಮೊಗಾದಿಶುವಿನ ಜನಭರಿತ ರಸ್ತೆಯೊಂದರಲ್ಲಿ ಶನಿವಾರ ಟ್ರಕ್ ಬಾಂಬ್ ದಾಳಿ ನಡೆಸಲಾಗಿತ್ತು.

ಅಲ್-ಖಾಯಿದ ಜೊತೆಗೆ ಸಂಬಂಧ ಹೊಂದಿರುವ ಅಲ್-ಶಬಾಬ್ ಭಯೋತ್ಪಾದಕ ಗುಂಪು ಈ ಕೃತ್ಯ ನಡೆಸಿದೆ ಎಂದು ಸೊಮಾಲಿಯ ಸರಕಾರ ಆರೋಪಿಸಿದೆ.

ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದೆ ಎಂದು ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News