ಆಸ್ತಿ ವಿವರ ನೀಡದ 261 ಸಂಸದರ ಅಮಾನತು : ಪಾಕ್ ಚುನಾವಣಾ ಆಯೋಗದ ಕ್ರಮ

Update: 2017-10-16 17:17 GMT

ಇಸ್ಲಾಮಾಬಾದ್, ಅ. 16: ತಮ್ಮ ಆಸ್ತಿ ವಿವರಗಳನ್ನು ನೀಡದ 261 ಪಾಕಿಸ್ತಾನಿ ಸಂಸದರು ಮತ್ತು ಶಾಸಕರನ್ನು ಆ ದೇಶದ ಚುನಾವಣಾ ಆಯೋಗ ಸೋಮವಾರ ಅಮಾನತಿನಲ್ಲಿರಿಸಿದೆ. ಇದರಲ್ಲಿ ಪದಚ್ಯುತ ಪ್ರಧಾನಿ ನವಾಝ್ ಶರೀಫ್‌ರ ಅಳಿಯನೂ ಸೇರಿದ್ದಾರೆ.

ಚುನಾವಣಾ ಆಯೋಗವು ನ್ಯಾಶನಲ್ ಅಸೆಂಬ್ಲಿ, ಪ್ರಾಂತೀಯ ಅಸೆಂಬ್ಲಿಗಳು ಮತ್ತು ಸೆನೆಟ್‌ನ 261 ಸದಸ್ಯರನ್ನು ಅಮಾನತಿನಲ್ಲಿರಿಸಿದೆ ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

ಶರೀಫ್‌ರ ಅಳಿಯ ಹಾಗೂ ಪಾಕಿಸ್ತಾನ್ ಮುಸ್ಲಿಮ್ ಲೀಗ್ (ಎನ್) ಸದಸ್ಯ ಕ್ಯಾಪ್ಟನ್ ಮುಹಮ್ಮದ್ ಸಫ್ದರ್, ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷದ ನ್ಯಾಶನಲ್ ಅಸೆಂಬ್ಲಿ ಸದಸ್ಯೆ ಆಯೇಶಾ ಗುಲಾಲೈ, ಧಾರ್ಮಿಕ ವ್ಯವಹಾರಗಳ ಸಚಿವ ಸರ್ದಾರ್ ಯೂಸುಫ್ ಮತ್ತು ಮಾಜಿ ನ್ಯಾಶನಲ್ ಅಸೆಂಬ್ಲಿ ಸ್ಪೀಕರ್ ಫಹ್ಮಿದಾ ಮಿರ್ಝಾ ಈ ಪಟ್ಟಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News