ಸ್ಪೇನ್‌ನಿಂದ ಕ್ಯಾಟಲನ್ ನಾಯಕನಿಗೆ ಅಂತಿಮ ಗಡು

Update: 2017-10-16 17:23 GMT

ಮ್ಯಾಡ್ರಿಡ್ (ಸ್ಪೇನ್), ಅ. 16: ಸ್ಪೇನ್‌ನಿಂದ ಕ್ಯಾಟಲೋನಿಯವನ್ನು ಸ್ವತಂತ್ರಗೊಳಿಸುವ ತನ್ನ ಉದ್ದೇಶವನ್ನು ಕ್ಯಾಟಲನ್ ನಾಯಕ ಕಾರ್ಲ್ಸ್ ಪುಯಿಗ್ಡಮಂಟ್ ಗುರುವಾರ ಬೆಳಗ್ಗೆ 10 ಗಂಟೆಯ ಒಳಗೆ ಕೈಬಿಡದಿದ್ದರೆ, ಆ ವಲಯದ ನಿಯಂತ್ರಣವನ್ನು ಸ್ಪೇನ್ ಸರಕಾರ ವಹಿಸಿಕೊಳ್ಳಲಿದೆ ಹಾಗೂ ಅದನ್ನು ನೇರವಾಗಿ ಆಳಲಿದೆ ಎಂದು ಸ್ಪೇನ್ ಉಪ ಪ್ರಧಾನಿ ಸೊರಯಾ ಸೇಂಝ್ ಡಿ ಸಾಂಟಮಾರಿಯ ಹೇಳಿದ್ದಾರೆ.

‘‘ಈ ವಿವಾದವನ್ನು ಪರಿಹರಿಸುವ ಅವಕಾಶವನ್ನು ಪುಯಿಗ್ಡಮಂಟ್ ಈಗಲೂ ಹೊಂದಿದ್ದಾರೆ. ಸ್ವಾತಂತ್ರ ಘೋಷಣೆಗೆ ಅವರು ಒಂದೋ ಬದ್ಧರಾಗಬೇಕು, ಇಲ್ಲವೇ ಅದನ್ನು ಕೈಬಿಡಬೇಕು’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News