ದೇಹದ ತೂಕ ಕಡಿಮೆಯಾಗಬೇಕೇ ?... ಹಾಗಾದರೆ ಈ ರಸವನ್ನು ಸೇವಿಸಿ

Update: 2017-10-17 10:28 GMT

 ಆರೋಗ್ಯಯುತವಾಗಿ ಬದುಕಲು ದೇಹತೂಕ ಅತಿಯಾಗದಂತೆ ಮತ್ತು ಯಕೃತ್ತು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ದೇಹದ ತೂಕ ಮತ್ತು ಪ್ರಮುಖ ಅಂಗಾಂಗಗಳ ಆರೋಗ್ಯವನ್ನು ಕಾಯ್ದುಕೊಳ್ಳುವುದು ಕೊಂಚ ಕಠಿಣವೆನಿಸಿದರೂ ವಾಸ್ತವದಲ್ಲಿ ಆರೋಗ್ಯಕರ ತರಕಾರಿಗಳನ್ನು ಸೇವಿಸಿದರೆ ದೇಹತೂಕ ವನ್ನು ಇಳಿಸಿಕೊಳ್ಳುವ ಗುರಿಯನ್ನು ಸುಲಭವಾಗಿ ಸಾಧಿಸಬಹುದು. ಅದಕ್ಕಾಗಿಯೇ ಇಲ್ಲೊಂದು ಆರೋಗ್ಯಕರ ರಸವಿದೆ. ಕ್ಯಾಬೇಜ್ ಮತ್ತು ಶುಂಠಿ ಈ ರಸದಲ್ಲಿ ಪ್ರಮುಖ ವಾಗಿದ್ದು, ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ತೂಕ ಇಳಿಯುತ್ತದೆ, ಜೊತೆಗೆ ಯಕೃತ್ತೂ ಸುಸ್ಥಿತಿಯಲ್ಲಿರುತ್ತದೆ.

 ಕ್ಯಾಬೇಜ್ ಪೊಟ್ಯಾಷಿಯಂ, ವಿಟಾಮಿನ್ ಸಿ, ಮತ್ತು ಗಂಧಕದಂತಹ ಹಲವಾರು ಅಗತ್ಯ ಪೋಷಕಾಂಶಗಳ ಆಗರವಾಗಿದೆ. ವಿಟಾಮಿನ್ ಸಿ ಮತ್ತು ಗಂಧಕ ಯಕೃತ್ತಿನಲ್ಲಿಯ ಯೂರಿಕ್ ಆ್ಯಸಿಡ್ ಮತ್ತು ಫ್ರೀ ರ್ಯಾಡಿಕಲ್‌ಗಳನ್ನು ನಿವಾರಿಸಿ ಅದನ್ನು ವಿಷಮುಕ್ತ ಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ. ಕ್ಯಾಬೇಜ್‌ನ ಉರಿಯೂತ ನಿವಾರಕ ಗುಣಗಳು ನಿರ್ಜಲೀಕರಣವನ್ನು ತಗ್ಗಿಸುತ್ತವೆ.

ಶುಂಠಿಯಲ್ಲಿರುವ ಜಿಂಜಿರಾಲ್ ಮತ್ತು ಶೋಗಾ ಯಕೃತ್ತನ್ನು ಸ್ವಚ್ಛಗೊಳಿಸುತ್ತವೆ, ಕ್ಯಾಬೇಜ್ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವುದರಿಂದ ದೇಹದ ತೂಕ ಕಡಿಮೆ ಯಾಗಿಸಿಕೊಳ್ಳಲು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಶುಂಠಿಯು ನೈಸರ್ಗಿಕವಾಗಿ ದೇಹತೂಕವನ್ನು ಇಳಿಸುತ್ತದೆ.

ಬೇಕಾಗುವ ಸಾಮಗ್ರಿಗಳು:

► ಒಂದು ಕ್ಯಾಬೇಜ್

► ಒಂದೆರಡು ಶುಂಠಿ ತುಂಡುಗಳು

► ಎರಡು ಚಮಚ ತಾಜಾ ಲಿಂಬೆರಸ

► ಒಂದು ಸೇಬು

► ಒಂದೂವರೆ ಚಮಚ ಜೀರಿಗೆ

 ರಸ ತಯಾರಿಕೆ ವಿಧಾನ: ಕ್ಯಾಬೇಜ್, ಶುಂಠಿ ಮತ್ತು ಸೇಬನ್ನು ಸಣ್ಣತುಂಡುಗಳನ್ನಾಗಿ ಹೆಚ್ಚಿಕೊಳ್ಳಿ. ಇವುಗಳಿಗೆ ಒಂದೂವರೆ ಕಪ್ ನೀರನ್ನು ಸೇರಿಸಿ 4-5 ನಿಮಿಷಗಳವರೆಗೆ ಕುದಿಸಿ. ನಂತರ ಜೀರಿಗೆಯನ್ನು ಸೇರಿಸಿ ಎಲ್ಲವನ್ನೂ ಬ್ಲೆಂಡ್ ಮಾಡಿ. ಹೀಗೆ ಮಾಡುವಾಗ ಅಗತ್ಯವಾದರೆ ಸ್ವಲ್ಪ ನೀರು ಬೆರೆಸಿ. ಇದಕ್ಕೆ ಲಿಂಬೆರಸವನ್ನು ಸೇರಿಸಿದರೆ ಆರೋಗ್ಯಕರ ಪೇಯವು ಸಿದ್ಧ.

ಅತ್ಯುತ್ತಮ ಪರಿಣಾಮಕ್ಕಾಗಿ ಈ ರಸವನ್ನು ಪ್ರತಿದಿನ ಬೆೆಳಿಗ್ಗೆ ಸೇವಿಸಬೇಕು. ಇದನ್ನು ಫ್ರಿಝ್‌ನಲ್ಲಿಟ್ಟರೆ ಹೆಚ್ಚು ಕಾಲ ಬಾಳಿಕೆ ಬರುವ ಜೊತೆಗೆ ತಂಪಾಗಿಯೂ ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News