×
Ad

ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲನ್ನು ವಿವಾದಗಳಿಗೆ ಎಳೆದು ತರುವುದು ಸರಿಯಲ್ಲ

Update: 2017-10-17 18:47 IST

ಕಾನ್ಪುರ, ಅ.17: ತಾಜ್ ಮಹಲ್ ಬಗ್ಗೆ ಬಿಜೆಪಿ ಶಾಸಕ ಸಂಗೀತ್ ಸೋಮ್ ನೀಡಿರುವ ವಿವಾದಾತ್ಮಕ ಹೇಳಿಕೆಯ ಬಗ್ಗೆ ಅಸಾಮಾಧಾನ ವ್ಯಕ್ತಪಡಿಸಿರುವ ಉತ್ತರಪ್ರದೇಶ ರಾಜ್ಯಪಾಲ ರಾಮ್ ನಾಯ್ಕ್ ವಿವಾದಗಳಿಗೆ ತಾಜ್ ಮಹಲ್ ನಂತಹ ಸ್ಮಾರಕಗಳನ್ನು ಎಳೆದು ತರುವುದು ಸರಿಯಲ್ಲ ಎಂದಿದ್ದಾರೆ.

ಆಕ್ರಮಣಕಾರರಿಂದ ಕಟ್ಟಲ್ಪಟ್ಟ ತಾಜ್ ಮಹಲ್ ಭಾರತದ ಸಂಸ್ಕೃತಿಯ ಭಾಗವಲ್ಲ. ಇದನ್ನು ಭಾರತದ ಇತಿಹಾಸದಲ್ಲಿ ಸೇರಿಸಲು ಸಾಧ್ಯವಿಲ್ಲ ಎಂದು ಸಂಗೀತ್ ಸೋಮ್ ಹೇಳಿದ್ದರು. ಈ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ರಾಮ್ ನಾಯ್ಕ್, ತಾಜ್ ಮಹಲ್ ವಿಶ್ವದ ಅದ್ಭುತಗಳಲ್ಲೊಂದು. ತಾಜ್ ಮಹಲನ್ನು ವಿವಾದಕ್ಕೆಳೆದು ತರುವುದು ಸರಿಯಲ್ಲ” ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಸಂಗೀತ್ ಸೋಮ್ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದ ಉತ್ತರಪ್ರದೇಶ ಸಿಎಂ ಆದಿತ್ಯನಾಥ್, ತಾಜ್ ಮಹಲನ್ನು ಯಾರು, ಯಾವ ಕಾರಣಕ್ಕೆ ಕಟ್ಟಿದ್ದಾರೆ ಎನ್ನುವುದು ಮುಖ್ಯವಲ್ಲ. ಅದನ್ನು ಭಾರತೀಯ ಕಾರ್ಮಿಕರ ಬೆವರು ಮತ್ತು ರಕ್ತದಿಂದ ನಿರ್ಮಿಸಲಾಗಿದೆ” ಎಂದಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News