ಘಾನಾ-ನೈಜರ್ ಹಣಾಹಣಿ

Update: 2017-10-17 18:02 GMT

ನವಿ ಮುಂಬೈ, ಅ.17: ಎರಡು ಬಾರಿ ಚಾಂಪಿಯನ್ ಪಟ್ಟ ಜಯಿಸಿದ್ದ ಘಾನಾ ತಂಡ ಫಿಫಾ ಅಂಡರ್-17 ವಿಶ್ವಕಪ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ತನ್ನ ನೆರೆಯ ದೇಶದ ತಂಡ ನೈಜರ್‌ನ್ನು ಬುಧವಾರ ಎದುರಿಸಲಿದೆ.

  ಘಾನಾ ತಂಡ 1991ಮತ್ತು 1995ರಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು. 1990ರಿಂದ ಈ ತನಕ ಐದು ಆವೃತ್ತಿಗಳ ಪೈಕಿ 4 ಆವೃತ್ತಿಗಳಲ್ಲಿ ಫೈನಲ್ ತಲುಪಿತ್ತು.

ಘಾನಾ ತಂಡ ‘ಎ’ ಗುಂಪಿನಲ್ಲಿ ಆತಿಥೇಯ ಭಾರತದ ವಿರುದ್ಧ 4-0 ಮತ್ತು ಕೊಲಂಬಿಯಾ ವಿರುದ್ಧ 1-0 ಅಂತರದಲ್ಲಿ ಜಯ ಗಳಿಸಿತ್ತು. ಅಮೆರಿಕ ವಿರುದ್ಧ 1-0 ಅಂತರದಲ್ಲಿ ಸೋಲು ಅನುಭವಿಸಿತ್ತು. ಎರಡು ಗೆಲುವಿನೊಂದಿಗೆ ಘಾನಾ ಪ್ರಿ ಕ್ವಾರ್ಟರ್ ಫೈನಲ್‌ಗೆ ತೇರ್ಗಡೆಯಾಗಿತ್ತು.

 ನೈಜರ್ ತಂಡ ‘ಡಿ’ ಗ್ರೂಪ್‌ನಲ್ಲಿ ಸ್ಪೇನ್ ವಿರುದ್ಧ 4-0 ಮತ್ತು ಬ್ರೆಝಿಲ್ ವಿರುದ್ಧ 2-0 ಅಂತರದಲ್ಲಿ ಸೋಲು ಅನುಭವಿಸಿತ್ತು. ಆದರೆ ಕೊರಿಯಾ ಡಿಪಿಆರ್ ವಿರುದ್ಧ 1-0 ಗೆಲುವಿನೊಂದಿಗೆ ಪ್ರಿ ಕ್ವಾರ್ಟರ್ ಫೈನಲ್ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News