ಕಲ್ಲಿದ್ದಲು ಮಾಲಿನ್ಯ : ಸಿಂಗರೌಲಿ ಮುಂಚೂಣಿಯಲ್ಲಿ

Update: 2017-10-19 16:45 GMT

ಸಿಂಗರೌಲಿ, ಅ.19: ಮಧ್ಯಪ್ರದೇಶದ ಸೋನಾಭದ್ರಾ ಜಿಲ್ಲೆ ಹಾಗೂ ಮಧ್ಯಪ್ರದೇಶದ ನಡುವೆ ಇರುವ 2200 ಚ.ಕಿ.ಮೀ. ವಿಸ್ತೀರ್ಣದ ಸಿಂಗರೌಲಿ ಪ್ರಾಂತವು ಭಾರತದ ಕಲ್ಲಿದ್ದಲು ಮಾಲಿನ್ಯ ಪ್ರದೇಶದ ನಕ್ಷೆಯಲ್ಲಿ ಮುಂಚೂಣಿಯ ಸ್ಥಾನ ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಾಣಾಸಿಯಿಂದ 200 ಕಿ.ಮೀ. ದೂರದಲ್ಲಿರುವ ಈ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ವಾಯು ಮಾಲಿನ್ಯ ಉಲ್ಬಣಿಸುತ್ತಿರುವುದು ಪರಿಸರವಾದಿಗಳಲ್ಲಿ ಆತಂಕವನ್ನುಂಟು ಮಾಡಿದೆ.

 ಭಾರತದ ಪ್ರಮುಖ ಉಷ್ಣ ವಿದ್ಯುತ್ ಉತ್ಪಾದನಾ ಕೇಂದ್ರವಾದ ಸಿಂಗರೌಲಿಯು ತನ್ನ ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕಗಳಿಂದ ಅಪಾಯಕಾರಿಯಾಗಿ ಹೊರಹೊಮ್ಮುವ ಇಂಗಾಲದ ಮಾಲಿನ್ಯವನ್ನು 2018ರೊಳಗೆ ಕಡಿತಗೊಳಿಸಲು ವಿಧಿಸಿದ ಗಡುವನ್ನು ಈಡೇರಿಸುವಲ್ಲಿ ವಿಫಲವಾಗಿದೆ. ದಿಲ್ಲಿಯ ಎರಡು ಪಟ್ಟು ಅಧಿಕ ವಿಸ್ತೀರ್ಣವಿರುವ ಸಿಂಗರೌಲಿಯಲ್ಲಿ ಪ್ರತಿದಿನವೂ ಎರಡೂವರೆ ಲಕ್ಷ ಟನ್‌ಗಳಷ್ಟು ಕಲ್ಲಿದ್ದಲು ಉರಿಯುತ್ತಿದೆ. ಇಲ್ಲಿ ಕಲ್ಲಿದ್ದಲು ಆಧಾರಿತವಾದ 10 ವಿದ್ಯುತ್ ಉತ್ಪಾದನಾ ಘಟಕಗಳು ಕಾರ್ಯಾಚರಿಸುತ್ತಿದ್ದು 21 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿವೆ.

  ಈ ಘಟಕಗಳು ಉತ್ತರಪ್ರದೇಶದ ಗಾಜಿಯಾಬಾದ್ ಬಳಿಕ ಸಿಂಗರೌಲಿಯನ್ನು ದೇಶದ ಅತ್ಯಂತ ಮಾಲಿನ್ಯಭರಿತ ಕೈಗಾರಿಕಾ ವಲಯವನ್ನಾಗಿ ಮಾಡಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆಗೊಳಿಸಿರುವ ಅಂಕಿಅಂಶಗಳ ಪ್ರಕಾರ ಅಪಾಯಕಾರಿ ಅನಿಲಗಳಾದ ಪಿಎಂ19, 0.8 ಮಿಲಿಯನ್ ಟನ್ ಎಸ್‌ಓ2, 0.9 ಮಿಲಿಯನ್ ಟನ್ ಎನ್‌ಓಎಕ್ಸ್ ಹಾಗೂ ಸುಮಾರು 8.4 ಟನ್ ಪಾದರಸವು, ಈ ವಿದ್ಯುತ್ ಸ್ಥಾವರಗಳಿಂದ ವಿಸರ್ಜಿಸಲ್ಪಡುತ್ತವೆ.

2018ರೊಳಗೆ ದೇಶಾದ್ಯಂತದ ಉಷ್ಣ ವಿದ್ಯುತ್ ಸ್ಥಾವರಗಳಿಂ ವಿಷಕಾರಿ ಆಕ್ಸೈಡ್‌ಗಳಾದ ರಂಜಕ ಹಾಗೂ ನೈಟ್ರೋಜನ್‌ನ ಹೂರಸೂಸುವಿಕೆಯ ಕಡಿತವನ್ನು ಆರಂಭಿಸಲಿದೆಯೆಂದು ಕೇಂದ್ರ ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News