ಜಲಿಯನ್‌ವಾಲಾಬಾಗ್ ಹತ್ಯೆಗೆ ಬ್ರಿಟನ್ ಕ್ಷಮೆ ಕೋರಲಿ: ಬ್ರಿಟನ್ ಸಂಸದ

Update: 2017-10-19 17:38 GMT

ಲಂಡನ್, ಅ. 19: 1919ರ ಜಲಿಯನ್‌ವಾಲಾಬಾಗ್ ಹತ್ಯಾಕಾಂಡಕ್ಕೆ ಬ್ರಿಟನ್ ಔಪಚಾರಿಕ ಕ್ಷಮಾಪಣೆ ಸಲ್ಲಿಸಬೇಕು ಎಂಬ ತನ್ನ ಸುದೀರ್ಘ ಕಾಲದ ಬೇಡಿಕೆಯನ್ನು ಲೇಬರ್ ಪಕ್ಷದ ಹಿರಿಯ ನಾಯಕ ಹಾಗೂ ಈಲಿಂಗ್ ಸೌತ್‌ಹಾಲ್ ಕ್ಷೇತ್ರದ ಸಂಸದ ವೀರೇಂದ್ರ ಶರ್ಮ ಪುನರುಚ್ಚರಿಸಿದ್ದಾರೆ.

ಮಂಗಳವಾರ ಹೌಸ್ ಆಫ್ ಕಾಮನ್ಸ್‌ನಲ್ಲಿ ‘ಅರ್ಲಿ ಡೇ ಮೋಶನ್’ ಒಂದನ್ನು ಮಂಡಿಸಿದ ಶರ್ಮ, ಆ ಹತ್ಯಾಕಾಂಡದ ಬಗ್ಗೆ ಪ್ರಧಾನಿ ತೆರೇಸಾ ಮೇ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.

ಬ್ರಿಟಿಶ್ ಸೇನೆ ನಡೆಸಿದ ಹತ್ಯಾಕಾಂಡದಲ್ಲಿ ಸಾವಿರಾರು ಸ್ವಾತಂತ್ರ ಹೋರಾಟಗಾರರು ಮೃತಪಟ್ಟಿದ್ದಾರೆ ಎಂದು ಇತಿಹಾಸಕಾರರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News