ರೊಹಿಂಗ್ಯಾ ಬಿಕ್ಕಟ್ಟಿನ ಹೊಣೆಯನ್ನು ಮ್ಯಾನ್ಮಾರ್ ಸೇನೆ ಹೊರಬೇಕು: ರೆಕ್ಸ್ ಟಿಲರ್‌ಸನ್

Update: 2017-10-19 17:42 GMT

ವಾಶಿಂಗ್ಟನ್, ಅ. 19: ಮ್ಯಾನ್ಮಾರ್‌ನ ರೊಹಿಂಗ್ಯಾ ಮುಸ್ಲಿಮರ ಇಂದಿನ ಸ್ಥಿತಿಗೆ ಆ ದೇಶದ ಸೇನಾ ನಾಯಕತ್ವ ಹೊಣೆ ಹೊರಬೇಕಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಹೇಳಿದ್ದಾರೆ.

ದೇಶದ ಭವಿಷ್ಯವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯಬೇಕು ಎನ್ನುವುದನ್ನು ಮ್ಯಾನ್ಮಾರ್‌ನ ಸೇನಾ ನಾಯಕತ್ವ ನಿರ್ಧರಿಸಬೇಕಾಗಿದೆ. ಯಾಕೆಂದರೆ, ಮ್ಯಾನ್ಮಾರನ್ನು ಅಮೆರಿಕ ಉದಯೋನ್ಮುಖ ಪ್ರಜಾಪ್ರಭುತ್ವ ಎಂಬುದಾಗಿ ಪರಿಗಣಿಸಿದೆ ಎಂದು ಟಿಲರ್‌ಸನ್ ನುಡಿದರು.

‘‘ಆದರೆ, ಇದು ನಿಜವಾದ ಪರೀಕ್ಷೆ. ಈ ಅತ್ಯಂತ ಗಂಭೀರ ವಿಷಯವನ್ನು ತಾವು ಹೇಗೆ ನಿಭಾಯಿಸಬಲ್ಲೆವು ಎನ್ನುವುದನ್ನು ನಿರ್ಧರಿಸುವುದು ಈ ಅಧಿಕಾರ ಹಂಚಿಕೆಯ ಸರಕಾರಕ್ಕೆ ಎದುರಾಗಿರುವ ನೈಜ ಪರೀಕ್ಷೆಯಾಗಿದೆ’’ ಎಂದರು.

ಆಗಸ್ಟ್ 25ರಂದು ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಹೊಸದಾಗಿ ಹಿಂಸಾಚಾರ ಆರಂಭಗೊಂಡ ಬಳಿಕ, ಅಲ್ಲಿನ ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ ಐದೂವರೆ ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News