ಹಣ ಸಾಗಣೆ ವಾಹನದಿಂದ ಹಣ ಕಳ್ಳತನ

Update: 2017-10-19 17:47 GMT

ಲಂಡನ್, ಅ. 19: ಹಣ ಸಾಗಿಸುತ್ತಿದ್ದ ತಮ್ಮದೇ ವಾಹನಗಳಿಂದ ಹಣ ಕದ್ದು ದರೋಡೆಯ ನಾಟಕವಾಡಿದ ಭಾರತ ಮೂಲದ ಭದ್ರತಾ ಸಿಬ್ಬಂದಿ ಹಾಗೂ ಆತನ ಸಹವರ್ತಿಯೊಬ್ಬನಿಗೆ ಬ್ರಿಟನ್‌ನ ನ್ಯಾಯಾಲಯವೊಂದು ಆರು ವರ್ಷಗಳಿಗೂ ಅಧಿಕ ಜೈಲು ಶಿಕ್ಷೆ ವಿಧಿಸಿದೆ.

ಅವರು 7 ಮಿಲಿಯ ಪೌಂಡ್ (ಸುಮಾರು 60 ಕೋಟಿ ರೂಪಾಯಿ) ಹಣವನ್ನು ದೋಚಿದ್ದರು.

ದರೋಡೆಯ ಪಿತೂರಿ ನಡೆಸಿರುವುದಕ್ಕಾಗಿ ಲಂಡನ್‌ನ ಕಿಂಗ್‌ಸ್ಟನ್ ಕ್ರೌನ್ ನ್ಯಾಯಾಲಯವು ರಣಜೀವ್ ಸಿಂಗ್ ಮತ್ತು ಆತನ ಜೊತೆಗಾರ ಮುಹಮ್ಮದ್ ಸಿದ್ದೀಕಿಗೆ ತಲಾ ಆರೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಯುರೋಪ್‌ನ ನಗದು ವ್ಯವಹಾರ ಕಂಪೆನಿ ‘ಲೂಮಿಸ್’ನ ಉದ್ಯೋಗಿಗಳಾಗಿದ್ದ ಅವರಿಬ್ಬರು ಈ ವರ್ಷದ ಮಾರ್ಚ್ 14ರಂದು 26 ಚೀಲಗಳಲ್ಲಿದ್ದ ಹಣ ಕದ್ದಿದ್ದರು. ಬಳಿಕ ತಮ್ಮ ಅಪರಾಧವನ್ನು ಮುಚ್ಚಿಹಾಕಲು ಹಣವನ್ನು ದರೋಡೆ ಮಾಡಲಾಗಿದೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News