ಗುಜರಾತ್ ಚುನಾವಣೆ: ಹಾರ್ದಿಕ್, ಅಲ್ಪೇಶ್, ಜಿಗ್ನೇಶ್ ಮೇಲೆ ಕಾಂಗ್ರೆಸ್ ಕಣ್ಣು

Update: 2017-10-21 16:56 GMT

ಗಾಂಧಿನಗರ, ಅ. 21: ಕೆಲವೇ ತಿಂಗಳಲ್ಲಿ ನಡೆಯಲಿರುವ ರಾಜ್ಯ ಚುನಾವಣೆಯ ಹಿನ್ನೆಲೆಯಲ್ಲಿ ನಿರ್ಣಾಯಕ ಬೆಂಬಲ ಪಡೆಯಲು ಹೋರಾಟಗಾರ ನಾಯಕರಾದ ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್ ಹಾಗೂ ಜಿಗ್ನೇಶ್ ಮೇವಾನಿ ಅವರನ್ನು ಗುಜರಾತ್ ಕಾಂಗ್ರೆಸ್ ಶನಿವಾರ ಸಂಪರ್ಕಿಸಿದೆ.

ಆಡಳಿತಾರೂಢ ಬಿಜೆಪಿ ವಿರುದ್ಧ ತಮ್ಮ ಸಮುದಾಯದಲ್ಲಿ ನಡೆಯುವ ಪ್ರಬಲ ಅಭಿಯಾನದ ನೇತೃತ್ವವನ್ನು ಪಟೇಲ್, ಠಾಕೂರ್ ಹಾಗೂ ಮೇವಾನಿ ವಹಿಸಿದ್ದಾರೆ.

ಒಂದು ವೇಳೆ ಹಾರ್ದಿಕ್ ಪಟೇಲ್ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದರೆ, ಕಾಂಗ್ರೆಸ್ ಟಿಕೆಟ್ ನೀಡಲು ಸಿದ್ದವಿದೆ. ದಲಿತರ ಹಕ್ಕುಗಳಿಗಾಗಿ ಜಿಗ್ನೇಶ್ ಮೇವಾನಿ ಹೋರಾಟ ನಡೆಸುತ್ತಿದ್ದರೆ, ಭ್ರಷ್ಟಾಚಾರ, ಮದ್ಯಪಾನ ವ್ಯಸನದ ವಿರುದ್ಧ ಅಲ್ಪೇಶ್ ಠಾಕರ್ ಹೋರಾಟ ನಡೆಸುತ್ತಿದ್ದಾರೆ. ತಮ್ಮೊಂದಿಗೆ ಕೈಜೋಡಿಸಲು ಕಾಂಗ್ರೆಸ್ ಈ ಮೂವರಿಗೆ ಆಹ್ವಾನ ನೀಡಿದೆ ಎಂದು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭರತ್ ಸಿನ್ಹಾ ಸೋಲಂಕಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ನನಗಿಲ್ಲ. ನಾನು ನಮ್ಮ ಸಮುದಾಯದ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸಲು ಬಯಸುತ್ತೇನೆ

ಹಾರ್ದಿಕ್ ಪಟೇಲ್

ಪ್ರಜಾಪ್ರಭುತ್ವವನ್ನು ನಾಶಗೊಳಿಸುವ ಆರೆಸ್ಸೆಸ್ ಬಿಜೆಪಿ ಸಿದ್ಧಾಂತವನ್ನು ನಾನು ವಿರೋಧಿಸುತ್ತೇನೆ. ಸಾಮಾಜಿಕ ಹಾಗೂ ರಾಜಕೀಯದ ವಿರುದ್ಧ ನನ್ನ ಚಳುವಳಿ. ನನ್ನ ಸಮುದಾಯದ ಜೊತೆಗೆ ಸಮಾಲೋಚಿಸಿದ ಬಳಿಕ ಕಾಂಗ್ರೆಸ್‌ಗೆ ಪ್ರತಿಕ್ರಿಯೆ ನೀಡುವೆ.

ಜಿಗ್ನೇಶ್ ಮೇವಾನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News