ನನ್ನ ಹತ್ಯೆಗೆ ಶರೀಫ್ ಸೋದರರು ಯತ್ನಿಸಿದ್ದರು: ಆಸಿಫ್ ಅಲಿ ಜರ್ದಾರಿ ಆರೋಪ

Update: 2017-10-22 17:53 GMT

ಲಾಹೋರ್,ಅ.22: ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಝ್ ಶರೀಫ್ ಹಾಗೂ ಅವರ ಸಹೋದರ ಶಹಬಾಝ್ ಶರೀಫ್ ತನ್ನನ್ನು ಹತ್ಯೆಗೈಯಲು ಎರಡು ಬಾರಿ ಪ್ರಯತ್ನಿಸಿದ್ದರೆಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಝರ್ದಾರಿ ರವಿವಾರ ಆರೋಪಿಸಿದ್ದಾರೆ.

  ಭ್ರಷ್ಟಾಚಾರ ಪ್ರಕರಣಗಳಿಗಾಗಿ ಎಂಟು ವರ್ಷಗಳ ಸುದೀರ್ಘ ಜೈಲು ಶಿಕ್ಷೆಯನ್ನು ತಾನು ಅನುಭವಿಸುತ್ತಿದ್ದಾಗ ತನ್ನನ್ನು ಕೊಲೆಗೈಯಲು ನವಾಝ್ ಹಾಗೂ ಶಹಬಾಝ್ ಸಂಚು ಹೂಡಿದ್ದಾರೆಂದು, 62 ವರ್ಷ ವಯಸ್ಸಿನ ಝರ್ದಾರಿ ಆರೋಪಿಸಿದ್ದಾರೆ. ಲಾಹೋರ್‌ನಲ್ಲಿರುವ ಬಿಲಾವಲ್ ಹೌಸ್‌ನಲ್ಲಿ ಪಕ್ಷದ ಕಾರ್ಯಕರ್ತರ ಜೊತೆ ಮಾತನಾಡುತ್ತಿದ್ದ ಅವರು ವಿಚಾರಣೆಗೆ ಹಾಜರಾಗಲು ತಾನು ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ಶರೀಫ್ ಸೋದರರು ತನ್ನನ್ನು ಹತ್ಯೆಗೈಯಲು ಎರಡು ಬಾರಿ ಯತ್ನಿಸಿದ್ದರು ಎಂದು ಆರೋಪಿಸಿದರು.

 “ನನ್ನ ಪತ್ನಿ ಬೆನಝೀರ್ ಭುಟ್ಟೋ ಹಾಗೂ ನನಗೆ ಶರೀಫ್ ಸಹೋದರರು ಏನು ಮಾಡಿದ್ದರೆಂಬುದನ್ನು ನಾನು ಮರೆಯಲಾರೆ. ಆದರೂ ನಾನು ಅವರನ್ನು ಕ್ಷಮಿಸಿದ್ದೆ ಹಾಗೂ ಪ್ರಜಾತಂತ್ರದ ಸನದಿಗೆ ಸಹಿಹಾಕಿದ್ದೆ. ಆದಾಗ್ಯೂ, ಮಿಯಾ ಸಾಹಿಬ್ (ನವಾಝ್) ನನಗೆ ದ್ರೋಹ ಬಗೆದರು ಹಾಗೂ ನನಗೆ ದೇಶದ್ರೋಹಿಯ ಹಣೆಪಟ್ಟಿ ಕಟ್ಟಲು ನ್ಯಾಯಾಲಯದ ಮೆಟ್ಟಲೇರಿದ್ದರು” ಎಂದವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News