ಕಗ್ಗಂಟಾದ ಭಾರತೀಯ ಬಾಲಕಿಯ ನಾಪತ್ತೆ ಪ್ರಕರಣ

Update: 2017-10-23 06:03 GMT

ಹ್ಯೂಸ್ಟನ್,ಅ.22:ಟೆಕ್ಸಾಸ್‌ನ ರಿಚರ್ಡ್‌ಸನ್ ನಗರದಲ್ಲಿ ಎರಡು ವಾರಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ 3 ವರ್ಷ ವಯಸ್ಸಿನ ಭಾರತೀಯ ಬಾಲಕಿಯು ಸುರಕ್ಷಿತವಾಗಿ ಹಿಂತಿರುಗಿ ಬರಲೆಂದು ಹಾರೈಸಿ ಹ್ಯೂಸ್ಟನ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ವಿಶೇಷ ಪ್ರಾರ್ಥನಾಸಭೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.

ಬಾಲಕಿ ಶೆರ್ಲಿನ್ ಮ್ಯಾಥ್ಯೂಸ್ ಹಾಲು ಕುಡಿಯದಿದ್ದುದಕ್ಕೆ ಶಿಕ್ಷೆಯಾಗಿ ಆಕೆಯನ್ನು ನಸುಕಿನಲ್ಲಿ 3:00 ಗಂಟೆಯ ವೇಳೆಗೆ ಮನೆಯ ಹೊರಗೆ ತಾನು ನಿಲ್ಲಿಸಿದ್ದು, ಆ ಬಳಿಕ ಆಕೆ ನಿಗೂಢವಾಗಿ ಕಣ್ಮರೆಯಾಗಿದ್ದಳೆಂದು ಅವಳನ್ನು ದತ್ತು ಸ್ವೀಕರಿಸಿದ್ದ ತಂದೆ ವೆಸ್ಲೆ ಮ್ಯಾಥ್ಯೂಸ್ ಪೊಲೀಸರಿಗೆ ತಿಳಿಸಿದ್ದರು.

 ಭಿನ್ನ ಸಾಮರ್ಥ್ಯದ ಈ ಮಗುವನ್ನು ವೆಸ್ಲೆ, ಕಳೆದ ವರ್ಷ ಬಿಹಾರದ ನಳಂದಾದಲ್ಲಿ ಎನ್‌ಜಿಓ ಸಂಸ್ಥೆಯೊಂದರ ಮೂಲಕ ಭಾರತೀಯ ಮೂಲದ ದಂಪತಿಯಂದ ದತ್ತು ಪಡೆದಿದ್ದರು.

 ದತ್ತುಪುತ್ರಿ ಶೆರಿನ್‌ಳನ್ನು ಸರಿಯಾಗಿ ನೋಡಿಕೊಳ್ಳದೆ, ಆಕೆಯನ್ನು ಅಪಾಯಕ್ಕೀಡು ಮಾಡಿದ್ದಕ್ಕಾಗಿ 37 ವರ್ಷ ವಯಸ್ಸಿನ ವೆಸ್ಲೆ ಮ್ಯಾಥ್ಯೂಸ್‌ನನ್ನು ಪೊಲೀಸರು ಬಂಧಿಸಿದ್ದರು ಹಾಗೂ ಆನಂತರ ಮುಚ್ಚಳಿಕೆ ಪಡೆದು ಆತನನ್ನು ಬಿಡುಗಡೆ ಮಾಡಿದ್ದರು.

ಬಾಲಕಿಯ ಸುರಕ್ಷಿತ ವಾಪಸಾತಿಗಾಗಿ ನಡೆದ ಪ್ರಾರ್ಥನಾ ಸಭೆಯ ವೇಳೆ, ಧರ್ಮಗುರುವೊಬ್ಬರು ಮ್ಯಾಥ್ಯೂಸ್ ಕುಟುಂಬದ ನಿವಾಸದ ಹೊರಗೆ ತೂಗುಹಾಕಿದ್ದ ಬಿತ್ತಿಪತ್ರವೊಂದರಲ್ಲಿ ‘ಬಾಲಕಿಯ ಹೆತ್ತವರಿಗೆ ಸತ್ಯ ತಿಳಿಸಿ’ ಎಂದು ಆಗ್ರಹಿಸುವ ಸಂದೇಶಗಳನ್ನು ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News