ವಿಶ್ವದ 110 ಕೋಟಿಗೂ ಅಧಿಕ ಜನರು ‘ಅಸ್ತಿತ್ವ ರಹಿತರು’ !

Update: 2017-10-22 17:20 GMT

ವಾಶಿಂಗ್ಟನ್,ಅ.22: ವಿಶ್ವದಾದ್ಯಂತ 110 ಕೋಟಿಗೂ ಅಧಿಕ ಜನರು ಸರಕಾರಿ ದಾಖಲೆಗಳಲ್ಲಿ ಅಧಿಕೃತವಾಗಿ ಅಸ್ತಿತ್ವವನ್ನೇ ಪಡೆದಿಲ್ಲವೆಂದು ವಿಶ್ವ ಬ್ಯಾಂಕ್ ವರದಿಯೊಂದು ಶನಿವಾರ ಬಹಿರಂಗಪಡಿಸಿದೆ. ಜಾಗತಿಕ ಜನಸಂಖ್ಯೆಯ ಗಣನೀಯ ಭಾಗವೊಂದು ಆರೋಗ್ಯ ಹಾಗೂ ಶೈಕ್ಷಣಿಕ ಸೇವೆಗಳಿಂದ ವಂಚಿತವಾಗಿರುವುದನ್ನು ಇದು ಸೂಚಿಸುತ್ತಿದೆಯೆಂದು ವರದಿಯು ಕಳವಳ ವ್ಯಕ್ತಪಡಿಸಿದೆ.

ಈ ‘ ಅಗೋಚರ’ ಜನರ ಪೈಕಿ ಹಲವಾರು ಪ್ರಾಥಮಿಕವಾಗಿ ಆಫ್ರಿಕಾ ಹಾಗೂ ಏಶ್ಯಗಳಲ್ಲಿ ವಾಸವಾಗಿದ್ದಾರೆ. ಹಿಂಸಾಚಾರಕ್ಕೆ ಸುಲಭವಾಗಿ ತುತ್ತಾಗುವ ಮೂರನೆ ಒಂದರಷ್ಟು ಜನನ ವಿವರಗಳನ್ನು ನೋಂದಣಿಯಾಗುತ್ತಿಲ್ಲವೆಂದು ವಿಶ್ವಬ್ಯಾಂಕ್‌ನ ಅಭಿವೃದ್ಧಿಗಾಗಿ ಗುರುತಿಸುವಿಕೆ(ಐಡಿ4ಡಿ) ಕಾರ್ಯಕ್ರಮವು ಇತ್ತೀಚೆಗೆ ಎಚ್ಚರಿಕೆ ನೀಡಿದೆ.

ಬಡತನ, ತಾರತಮ್ಯ,ಸೋಂಕುರೋಗಗಳು ಹಾಗೂ ಸಶಸ್ತ್ರ ಸಂಘರ್ಷಗಳನ್ನು ಎದುರಿಸುತ್ತಿರುವ ಭೌಗೋಳಿಕ ಪ್ರದೇಶಗಳ ಜನರಲ್ಲಿ ಈ ಸಮಸ್ಯೆ ತೀವ್ರವಾಗಿದೆಯೆಂದು ವರದಿ ಎಚ್ಚರಿಸಿದೆ. ಜನರು, ಅಧಿಕೃತವಾಗಿ ಅಸ್ತಿತ್ವದಲ್ಲಿರುವುದಕ್ಕೆ ಹಲವಾರು ಕಾರಣಗಳಿವೆಯಾದರೂ, ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಲ್ಲಿ ಜನರು ಹಾಗೂ ಸರಕಾರಿ ಸೇವೆಗಳ ಲಭ್ಯತೆಯಲ್ಲಿ ಅಗಾಧ ಅಂತರವಿರುವುದು ಅವುಗಳಲ್ಲಿ ಮುಖ್ಯವಾದದೆಂದು ಐಡಿ4ಡಿ ಕಾರ್ಯಕ್ರಮದ ನಿರ್ವಾಹಕಿ ವೈಜಯಂತಿ ದೇಸಾಯಿ ಹೇಳುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News