ಜಪಾನ್: ಶಿಂಜೊ ಅಬೆ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ

Update: 2017-10-22 17:36 GMT

ಟೋಕಿಯೊ,ಅ.22: ಜಪಾನ್ ಸಂಸತ್ ಚುನಾವಣೆಯ ಪ್ರಧಾನಿ ಶಿಂಜೊ ಅಬೆ ನೇತೃತ್ವದ ಕನ್ಸರ್ವೇಟಿವ್ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ದೊರೆಯಲಿದೆಯೆಂದು ಚುನಾವಣಾ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇದರೊಂದಿಗೆ ಉತ್ತರ ಕೊರಿಯ ವಿರುದ್ಧ ಶಿಂಜೊ ಅಬೆ ತಳೆದಿರುವ ಕಠಿಣ ನಿಲುವು ಹಾಗೂ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡುವ ಅವರ ಕ್ರಮಗಳಿಗೆ ಜಪಾನ್ ಮತದಾರರ ಅನುಮೋದನೆ ದೊರೆತಂತಾಗಿದೆ ಅವು ಹೇಳಿವೆ.

 465 ಸದಸ್ಯ ಬಲದ ಜಪಾನ್ ಸಂಸತ್‌ನಲ್ಲಿ ಶಿಂಜೊ ಅಬೆ ನೇತೃತ್ವದ ಕನ್ಸರ್ವೇಟಿವ್ ಮೈತ್ರಿಕೂಟವು ಪಡೆಯಲಿದೆಯೆಂದು ಖಾಸಗಿ ಟಿವಿ ವಾಹಿನಿ ಟಿಬಿಎಸ್ ಚುನಾವಣೋತ್ತರ ಸಮೀಕ್ಷೆಯಲ್ಲಿ ತಿಳಿಸಿದೆ.

ಇಂದು ಬೆಳಗ್ಗೆ ನಡೆದ ಚುನಾವಣೆಯಲ್ಲಿ ಲಕ್ಷಾಂತರ ಜಪಾನ್ ಪ್ರಜೆಗಳು ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಾಗೂ ಬಿರುಗಾಳಿಯನ್ನು ಲೆಕ್ಕಿಸದೆ ಮತದಾನದಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News