×
Ad

ಪದ್ಮ ವಿಭೂಷಣ ಗಿರಿಜಾ ದೇವಿ ನಿಧನ

Update: 2017-10-25 23:11 IST

ಕೋಲ್ಕತಾ, ಅ. 25: ಶ್ರೇಷ್ಠ ಶಾಸ್ತ್ರೀಯ ಸಂಗೀತಗಾರ್ತಿ ಹಾಗೂ ಪದ್ಮ ವಿಭೂಷಣ ಗೌರವಾನ್ವಿತೆ ಗಿರಿಜಾ ದೇವಿ ಹೃದಯಾಘಾತದಿಂದ ಬುಧವಾರ Tಅಪರಾಹ್ನ ಇಲ್ಲಿನ ಸಿಟಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಬನಾರಸ್ ಘರಾನಾದ ದಂತಕತೆಯಾಗಿರುವ ಗಿರಿಜಾ ದೇವಿ 1972ರಲ್ಲಿ ಪದ್ಮಶ್ರೀ, 1989ರಲ್ಲಿ ಪದ್ಮ ಭೂಷಣ ಹಾಗೂ 2016ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.

1929 ಮೇ 8ರಂದು ಬನಾರಸ್ ಸಮೀಪದ ಗ್ರಾಮವೊಂದರಲ್ಲಿ ಜಮೀನ್ದಾರರ ಕುಟುಂಬದಲ್ಲಿ ಗಿರಿಜಾ ದೇವಿ ಜನಿಸಿದ್ದರು. ಬಾಲ್ಯ ಕಾಲದಲ್ಲೇ ಸಂಗೀತ ಅವರ ಒಡನಾಡಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News