32 ಮಹಿಳೆಯರಿಗೆ ಎಚ್‌ಐವಿ ಸೋಂಕು ಹರಡಿದಾತನಿಗೆ 24 ವರ್ಷ ಜೈಲು
Update: 2017-10-28 22:17 IST
ರೋಮ್ (ಇಟಲಿ), ಅ. 28: 30ಕ್ಕೂ ಅಧಿಕ ಮಹಿಳೆಯರಿಗೆ ಎಚ್‌ಐವಿ ಸೋಂಕು ಹರಡಿದ ಅಪರಾಧಕ್ಕಾಗಿ ಇಟಲಿಯ ವ್ಯಕ್ತಿಯೊಬ್ಬನಿಗೆ 24 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಲಯವೊಂದು ಹೇಳಿದೆ.
ತನಗೆ ಎಚ್‌ಐವಿ ಸೋಂಕು ಇದೆ ಎಂದು ಗೊತ್ತಿದ್ದೂ ಮಹಿಳೆಯರನ್ನು ಅಪಾಯಕ್ಕೆ ಗುರಿಪಡಿಸಿದ ಆರೋಪವನ್ನು ಆತ ಹೊತ್ತಿದ್ದಾನೆ.
33 ವರ್ಷದ ಅಕೌಂಟಂಟ್ ವೇಲೆಂಟಿನೊ ಟಲುಟೊ 10 ವರ್ಷಗಳ ಕಾಲ ಡಝನ್‌ಗಟ್ಟಲೆ ಮಹಿಳೆಯರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಆಕರ್ಷಿಸಿದ್ದನು. ಅಂತಿಮವಾಗಿ ಆತನನ್ನು 2015 ನವೆಂಬರ್‌ನಲ್ಲಿ ಬಂಧಿಸಲಾಯಿತು.
ಈ ಅವಧಿಯಲ್ಲಿ ಆತ 53 ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದನು ಹಾಗೂ ಈ ಪೈಕಿ 32 ಮಂದಿಗೆ ಎಚ್‌ಐವಿ ಸೋಂಕು ಹರಡುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.