×
Ad

ಅರುಣಾಚಲ ಗಡಿ ಸಮೀಪ ಭದ್ರವಾಗಿ ತಳವೂರಲು ಕುರಿಗಾಹಿ ಸಮುದಾಯಕ್ಕೆ ಕ್ಸಿಜಿನ್ ಪಿಂಗ್ ಕರೆ

Update: 2017-10-29 22:55 IST

ಬೀಜಿಂಗ್,ಅ.29: ಭಾರತ-ಚೀನಾ ಗಡಿ ಸಮೀಪ ಭದ್ರವಾಗಿ ತಳವೂರುವಂತೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಟಿಬೆಟ್‌ನಲ್ಲಿರುವ ಕುರಿಗಾಹಿ ಸಮುದಾಯಗಳಿಗೆ ಕರೆ ನೀಡಿದ್ದಾರೆ.

  ಕುರಿಗಾಹಿಕುಟುಂಬವೊಂದರ ಇಬ್ಬರು ಬಾಲಕಿಯರು ಟಿಬೆಟ್‌ನ ಲೂಂಜ್ ಜಿಲ್ಲೆಯಲ್ಲಿರುವ ತಮ್ಮ ವಸತಿಪ್ರದೇಶವನ್ನು ಪರಿಚಯಿಸಿ ಅಧ್ಯಕ್ಷ ಕ್ಸಿ-ಜಿನ್‌ಪಿಂಗ್ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಪತ್ರ ಬರೆದಿರುವ ಚೀನಿ ಅಧ್ಯಕ್ಷರು ವಸತಿಪ್ರದೇಶಗಳನ್ನು ಅಭಿವೃದ್ಧಿಪಡಿಸಿ,ಭಾರತದ ಗಡಿಭಾಗದಲ್ಲಿ ಭದ್ರವಾಗಿ ನೆಲೆಯೂರುವಂತೆ ಸಲಹೆ ಮಾಡಿದ್ದಾರೆ.

ಟಿಬೆಟ್‌ನ ಲೂಂಝ್ ಪ್ರದೇಶವು, ಭಾರತದ ಅರುಣಾಚಲ ಪ್ರದೇಶದ ಗಡಿಗೆ ತಾಗಿಕೊಂಡಿದೆ. ಅರುಣಾಚಲ ಪ್ರದೇಶವನ್ನು ಚೀನಾವು ದಕ್ಷಿಣ ಟಿಬೆಟ್ ಎಂಬುದಾಗಿ ಕರೆಯುತ್ತಿದ್ದು, ಅದು ತನಗೆ ಸೇರಿದ್ದೆಂದು ವಾದಿಸುತ್ತಿದೆ.

ಕಳೆದ ವಾರ ಚೀನಾ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆಗೊಂಡ ಬಳಿಕ ಕ್ಸಿ ಅವರು ಚೀನಾ ಸೇನೆಗೆ ಯುದ್ಧ ಸನ್ನದ್ಧವಾಗಿರುವಂತೆ ಕರೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News