ಮಗಳನ್ನೇ ಅತ್ಯಾಚಾರಗೈದ ತಂದೆಯ ಬಂಧನ

Update: 2017-10-30 06:24 GMT

ಹೈದರಾಬಾದ್, ಅ. 30: ನಗರದ ಹೊರವಲಯದ ತಿಮ್ಮಾರೆಡ್ಡಿಗುಡ್ಡ ಎಂಬಲ್ಲಿ ಹದಿನಾರು ವರ್ಷ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಗರ್ಭಿಣಿಯಾಗಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಕೆಲ ತಿಂಗಳುಗಳಲ್ಲಿ ಈ ಕೂಲಿಕಾರ್ಮಿಕ ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗಲು ಕಾರಣವಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದ್ದು, ವ್ಯಕ್ತಿಯ ವಿರುದ್ಧ ಭಾರತೀಯ ದಂಡಸಂಹಿತೆ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

"ಬಾಲಕಿ ಈಗ ಐದು ತಿಂಗಳ ಗರ್ಭಿಣಿಯಾಗಿದ್ದು, ಗರ್ಭಪಾತ ಮಾಡಿಸಿಕೊಳ್ಳುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ" ಎಂದು ನಗರ ಮೂಲದ ಮಕ್ಕಳ ಹಕ್ಕುಗಳ ಸ್ವಯಂಸೇವಾ ಸಂಸ್ಥೆ, ಬಾಲಲ ಹಕ್ಕುಲ ಸಂಘಂನ ಗೌರವಾಧ್ಯಕ್ಷ ಅಚ್ಯುತ ರಾವ್ ವಿವರಿಸಿದ್ದಾರೆ.

ಈ ಬಾಲಕಿಯ ತಾಯಿ ಹತ್ತು ವರ್ಷ ಹಿಂದೆ ಮೃತಪಟ್ಟಿದ್ದು, ಬಾಲಕಿಯ ಯೋಗಕ್ಷೇಮವನ್ನು ಸರ್ಕಾರ ವಹಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News