×
Ad

ಕ್ಯಾಟಲೋನಿಯ ಚುನಾವಣೆಯನ್ನು ಸ್ವೀಕರಿಸಿದ ಪ್ರತ್ಯೇಕತಾವಾದಿ ನಾಯಕ

Update: 2017-10-31 21:40 IST

ಮ್ಯಾಡ್ರಿಡ್, ಅ. 31: ಸ್ಪೇನ್ ಸರಕಾರವು ಕ್ಯಾಟಲೋನಿಯ ವಲಯದಲ್ಲಿ ನಡೆಸಲುದ್ದೇಶಿಸಿರುವ ಮಧ್ಯಾಂತರ ಚುನಾವಣೆಯನ್ನು ಸ್ವೀಕರಿಸಿರುವುದಾಗಿ ವಲಯದ ಪದಚ್ಯುತ ನಾಯಕ ಕಾರ್ಲ್ಸ್ ಪಿಜ್‌ಮಾಂಟ್ ಮಂಗಳವಾರ ಹೇಳಿದ್ದಾರೆ.

ಬ್ರಸೆಲ್ಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನ ವಿರುದ್ಧ ಬಂಡಾಯ ಮತ್ತು ದೇಶದ್ರೋಹದ ಆರೋಪಗಳನ್ನು ಹೊರಿಸಬೇಕು ಎಂಬುದಾಗಿ ಸ್ಪೇನ್‌ನ ಸರಕಾರಿ ವಕೀಲರು ಮಾಡಿರುವ ಶಿಫಾರಸಿನ ಹಿನ್ನೆಲೆಯಲ್ಲಿ ತಾನು ಬೆಲ್ಜಿಯಂನಲ್ಲಿ ಆಶ್ರಯ ಕೋರಿಲ್ಲ ಎಂದು ಹೇಳಿದರು.

ಸ್ಪೇನ್ ಸರಕಾರ ‘ಖಾತರಿ’ ನೀಡಿದ ಬಳಿಕ ತಾನು ಕ್ಯಾಟಲೋನಿಯಕ್ಕೆ ಮರಳುವುದಾಗಿ ಅವರು ಹೇಳಿದರು.

ಕ್ಯಾಟಲೋನಿಯ ಸ್ಪೇನ್‌ನಿಂದ ಪ್ರತ್ಯೇಕಗೊಂಡಿರುವ ಘೋಷಣೆಯ ಪರವಾಗಿ ಕ್ಯಾಟಲೋನಿಯ ಸಂಸತ್ತು ಇತ್ತೀಚೆಗೆ ಮತಹಾಕಿತ್ತು. ಅದರ ಬೆನ್ನಿಗೇ, ವಲಯದ ಸರಕಾರವನ್ನು ವಜಾಗೊಳಿಸಿದ ಸ್ಪೇನ್ ಅಲ್ಲಿನ ಸರಕಾರವನ್ನು ತನ್ನ ನೇರ ಆಡಳಿತಕ್ಕೆ ಒಳಪಡಿಸಿತ್ತು.

‘‘ಸುದೀರ್ಘ ಹೋರಾಟದ ದಾರಿಗೆ ಸಿದ್ಧವಾಗಿರುವಂತೆ ಕ್ಯಾಟಲೋನಿಯ ಜನತೆಯನ್ನು ನಾನು ಕೋರುತ್ತೇನೆ. ಪ್ರಜಾಪ್ರಭುತ್ವವು ನಮ್ಮ ವಿಜಯದ ಅಡಿಗಲ್ಲಾಗಿರುತ್ತದೆ’’ ಎಂದು ಪಿಜ್‌ಮಾಂಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News