ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಸಿದ್ಧ: ಶ್ರೇಯಸ್

Update: 2017-10-31 18:43 GMT

ಹೊಸದಿಲ್ಲಿ, ಅ.31: ಈ ವರ್ಷಾರಂಭದಲ್ಲಿ ದಕ್ಷಿಣ ಆಫ್ರಿಕ ‘ಎ’ ವಿರುದ್ಧ ಟೂರ್ನಮೆಂಟ್‌ನಲ್ಲಿ ಶತಕ ಗಳಿಸಿರುವುದು ತೃಪ್ತಿ ನೀಡಿದೆ. ನಾನು ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧನಿದ್ದೇನೆ’’ ಎಂದು ಭಾರತದ ಯುವ ಆಟಗಾರ ಶ್ರೇಯಸ್ ಅಯ್ಯರ್ ಹೇಳಿದ್ದಾರೆ. ಅಯ್ಯರ್ ಬುಧವಾರ ಆರಂಭವಾಗಲಿರುವ ನ್ಯೂಝಿಲೆಂಡ್ ವಿರುದ್ಧದ ಟ್ವೆಂಟಿ-20 ಸರಣಿಗೆ ಆಯ್ಕೆ ಮಾಡಲಾಗಿರುವ 16 ಸದಸ್ಯರನ್ನು ಒಳಗೊಂಡ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ನೀಡಿರುವ ಸ್ಥಿರ ಪ್ರದರ್ಶನದ ಆಧಾರದಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಈ ವರ್ಷಾರಂಭದಲ್ಲಿ ನಡೆದ ದಕ್ಷಿಣ ಆಫ್ರಿಕ ‘ಎ’ ವಿರುದ್ಧದ ತ್ರಿಕೋನ ಸರಣಿಯಲ್ಲಿ ಭಾರತ ‘ಎ’ ತಂಡದ ನಾಯಕತ್ವವಹಿಸಿದ್ದ ಅಯ್ಯರ್ ಟೂರ್ನಿಯ ಫೈನಲ್‌ನಲ್ಲಿ ದ.ಆಫ್ರಿಕದ ವಿರುದ್ಧ ಭರ್ಜರಿ ಶತಕ ದಾಖಲಿಸಿದ್ದರು.

‘‘ಈ ಶತಕ ನನಗೆ ನೆರವಾಗಲಿದೆ. ಆಫ್ರಿಕ ವಿರುದ್ಧ ಫೈನಲ್ ಪಂದ್ಯದ ತನಕ ನನಗೆ ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾಗಿರಲಿಲ್ಲ. ಫೈನಲ್ ಪಂದ್ಯ ಯಾವಾಗಲೂ ಮಹತ್ವದ್ದಾಗಿದೆ. ನಾನು ಯಾವುದೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಬಲ್ಲೆ’’ ಎಂದು ಅಯ್ಯರ್ ಹೇಳಿದ್ದಾರೆ.

ಮುಂಬೈ ದಾಂಡಿಗ ಅಯ್ಯರ್ 2014-15ರ ಋತುವಿನ ರಣಜಿ ಟ್ರೋಫಿಯಲ್ಲಿ 809 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News