2016ರಲ್ಲಿ ಹೊಸ ಕ್ಷಯರೋಗ ಪ್ರಕರಣಗಳು: ಭಾರತವೇ ನಂ.1: ಡಬ್ಲ್ಯೂಎಚ್‌ಒ ವರದಿ

Update: 2017-10-31 18:52 GMT

ಹೊಸದಿಲ್ಲಿ,ಅ.31: 2016ರಲ್ಲಿ ವಿಶ್ವಾದ್ಯಂತ 10.4 ಮಿಲಿಯನ್ ಕ್ಷಯರೋಗ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಶೇ.64ರಷ್ಟು ಪಾಲನ್ನು ಏಳು ದೇಶಗಳು ಹೊಂದಿವೆ ಮತ್ತು ಭಾರತ ಇವುಗಳಲ್ಲಿ ಅಗ್ರಸ್ಥಾನದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್‌ಒ)ಯು ತನ್ನ ಜಾಗತಿಕ ಕ್ಷಯರೋಗ ವರದಿ 2017ರಲ್ಲಿ ಹೇಳಿದೆ. ನಂತರದ ಸ್ಥಾನಗಳಲ್ಲಿ ಇಂಡೋನೇಷ್ಯಾ, ಚೀನಾ, ಫಿಲಿಪ್ಪೀನ್ಸ್, ಪಾಕಿಸ್ತಾನ, ನೈಜೀರಿಯಾ ಮತ್ತು ದ.ಆಫ್ರಿಕಾ ಇವೆ.

2016ರಲ್ಲಿ ವರದಿಯಾಗಿರುವ 10.4 ಮಿಲಿಯನ್ ಹೊಸ ಕ್ಷಯರೋಗಿಗಳ ಪೈಕಿ ಶೇ.10ರಷ್ಟು ಜನರು ಎಚ್‌ಐವಿ ಪೀಡಿತರಾಗಿದ್ದರು ಎಂದೂ ವರದಿಯು ಹೇಳಿದೆ.

ವರದಿ ವರ್ಷದಲ್ಲಿ ಸುಮಾರು 400,000 ಎಚ್‌ಐವಿ ಪೀಡಿತರು ಸೇರಿದಂತೆ ಅಂದಾಜು 1.7 ಮಿಲಿಯನ್ ಜನರು ಕ್ಷಯರೋಗಕ್ಕೆ ಬಲಿಯಾಗಿದ್ದಾರೆ. 2015ರ ಅಂಕಿಅಂಶಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣ ಶೇ.4ರಷ್ಟು ತಗ್ಗಿದೆ.

 ಅಲ್ಲದೆ, 2016ರಲ್ಲಿ ದಾಖಲಾದ 490,000 ಬಹುಔಷಧಿ ಪ್ರತಿರೋಧಕ ಕ್ಷಯರೋಗ (ಎಂಡಿಆರ್-ಟಿಬಿ)ಪ್ರಕರಣಗಳಲ್ಲಿ ಅರ್ಧದಷ್ಟು ಭಾರತ, ಚೀನಾ ಮತ್ತು ರಷ್ಯಾಗಳಿಗೆ ಸೇರಿವೆ ಎಂದೂ ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News