ಕಾರು ಬಾಂಬ್ ಸ್ಫೋಟ: ಐದು ಯೆಮೆನ್ ಸೈನಿಕರು ಬಲಿ

Update: 2017-11-05 15:59 GMT

ಏಡನ್, ನ.5: ದಕ್ಷಿಣ ಯೆಮೆನ್‌ನ ಏಡನ್‌ನಲ್ಲಿ ರವಿವಾರ ಕಾರ್ ಬಾಂಬ್ ಸ್ಫೋಟದಿಂದ ಕನಿಷ್ಟ ಐವರು ಯೆಮೆನ್ ಸೈನಿಕರು ಮೃತಪಟ್ಟಿರುವ ಘಟನೆ ನಡೆದಿದೆ. ಏಡನ್‌ನ ಖೋರ್ ಮಕ್ಸರ್ ಜಿಲ್ಲೆಯ ಚೆಕ್‌ಪೋಸ್ಟ್‌ನ ಹೊರಭಾಗದಲ್ಲಿ ಕಾರ್‌ಬಾಂಬರ್ ಓರ್ವ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ಭೀಕರ ಸದ್ದು ನಗರವನ್ನು ನಡುಗಿಸಿದ್ದು ಮೈಲುಗಟ್ಟಲೆ ದೂರದವರೆಗೂ ಹೊಗೆಯ ಕಾರ್ಮೋಡ ಹಬ್ಬಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಬಾಂಬ್‌ಸ್ಫೋಟವಾದ ತಕ್ಷಣ ಈ ಪ್ರದೇಶದಲ್ಲಿ ಗಲಭೆ ಭುಗಿಲೆದ್ದಿದೆ. ಕಾರು ಬಾಂಬ್ ಸ್ಫೋಟ ಹಾಗೂ ಆ ಬಳಿಕ ನಡೆದ ಗಲಭೆಯಲ್ಲಿ ಯಾರ ಕೈವಾಡವಿದೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 2015ರಲ್ಲಿ ಯೆಮೆನ್‌ನಲ್ಲಿ ಸಂಭವಿಸಿದ ಅಂತರ್ಯುದ್ಧದ ಸಂದರ್ಭ ಬಂಡುಗೋರರು ಯೆಮೆನ್ ರಾಜಧಾನಿ ಸನಾದ ಮೇಲೆ ನಿಯಂತ್ರಣ ಸಾಧಿಸಿದಾಗ ಯೆಮೆನ್ ರಾಜಧಾನಿಯನ್ನು ತಾತ್ಕಾಲಿಕವಾಗಿ ಏಡನ್‌ಗೆ ಸ್ಥಳಾಂತರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News