ವಿಯೆಟ್ನಾಮ್: ಚಂಡಮಾರುತಕ್ಕೆ 27 ಬಲಿ

Update: 2017-11-05 16:30 GMT

ಹನೋಯಿ, ನ.5: ವಿಯೆಟ್ನಾಮ್‌ನ ದಕ್ಷಿಣ-ಮಧ್ಯ ಕರಾವಳಿ ಪ್ರಾಂತಕ್ಕೆ ಅಪ್ಪಳಿಸಿರುವ ಚಂಡಮಾರುತ ಕನಿಷ್ಠ 27 ಮಂದಿಯನ್ನು ಬಲಿಪಡೆದಿದ್ದು 22 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಯೆಟ್ನಾಮ್‌ನ ಬಿನ್ ಡಿನ್ ಪ್ರಾಂತದ ಕಡಲ ತೀರದ ಬಳಿ ಮುಳುಗಡೆಯಾಗಿರುವ ಸರಕು ನೌಕೆಯಲ್ಲಿದ್ದ 17 ಸಿಬ್ಬಂದಿವರ್ಗದವರೂ ನಾಪತ್ತೆಯಾದವರಲ್ಲಿ ಸೇರಿದ್ದಾರೆ ಎಂದು ವಿಯೆಟ್ನಾಮ್‌ನ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ನೌಕೆಯಲ್ಲಿದ್ದ ಇತರ 74 ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ. 600ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನಾಶವಾಗಿದ್ದು ಸುಮಾರು 40,000 ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಬತ್ತದ ಕೃಷಿ ಹಾಗೂ ಇತರ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ. 228 ಮೀನುಗಾರಿಕಾ ದೋಣಿಗಳು ಮುಳುಗಡೆಯಾಗಿದೆ. ಚಂಡಮಾರುತದ ಕಾರಣ ರೈಲು ಸಂಚಾರ ಅಸ್ತವ್ಯವಸ್ತವಾಗಿದ್ದು ಸುಮಾರು 1,500ರಷ್ಟು ಪ್ರಯಾಣಿಕರು ರೈಲು ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಳ್ಳುವಂತಾಯಿತು. ಮಂಗಳವಾರದ ವರೆಗೆ ದೇಶದ ವಿವಿಧೆಡೆ ಭಾರೀ ಮಳೆ ಮುಂದುವರಿಯುವ ಮುನ್ಸೂಚನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News