×
Ad

ಅಧ್ಯಕ್ಷರಿಗೆ ಸಂಪೂರ್ಣ ನಿಷ್ಠೆಗೆ ಚೀನಾ ಸೇನೆಗೆ ಆದೇಶ

Update: 2017-11-06 22:10 IST

ಬೀಜಿಂಗ್, ನ. 6: ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಸಂಪೂರ್ಣ ನಿಷ್ಠೆ ವ್ಯಕ್ತಪಡಿಸುವಂತೆ ಚೀನಾ ಸೇನೆಗೆ ಆದೇಶ ನೀಡಲಾಗಿದೆ. ನಿಷ್ಠೆಯ ಮುಂದುವರಿದ ಭಾಗವಾಗಿ, ಅರೆಸೇನಾ ಪೊಲೀಸ್ ಪಡೆಯೊಂದು ಈಗ ಪ್ರತಿನಿತ್ಯ ಜಿನ್‌ಪಿಂಗ್‌ರ ಸ್ತೋತ್ರವನ್ನು ಹಾಡುತ್ತಿದೆ! ಆ ಮೂಲಕ ಜಿನ್‌ಪಿಂಗ್ ಸೇನೆಯ ಮೇಲಿನ ತನ್ನ ಹಿಡಿತವನ್ನು ಬಿಗಿಗೊಳಿಸಿದ್ದಾರೆ.

ಜಗತ್ತಿನ ಅತಿ ದೊಡ್ಡ ಸಶಸ್ತ್ರ ಪಡೆಗಳು ‘ಕ್ಸಿಗೆ ಸಂಪೂರ್ಣ ನಿಷ್ಠೆ ಹೊಂದಿರಬೇಕು, ಪ್ರಾಮಾಣಿಕವಾಗಿರಬೇಕು ಮತ್ತು ವಿಶ್ವಾಸಾರ್ಹವಾಗಿರಬೇಕು’ ಎಂದು ಕೇಂದ್ರೀಯ ಸೇನಾ ಆಯೋಗ ಹೊರಡಿಸಿದ ನೂತನ ಮಾರ್ಗದರ್ಶಿ ಸೂತ್ರವೊಂದು ಹೇಳಿದೆ.

ಚೀನಾದ ಸುಮಾರು 20 ಲಕ್ಷ ಬಲದ ಸೇನೆ ತಾಂತ್ರಿಕವಾಗಿ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಸೇನೆಯಾಗಿದೆ, ಸರಕಾರದ್ದಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News