ನೋಟು ಅಮಾನ್ಯೀಕರಣಕ್ಕೆ ಅನುಸರಿಸಿದ ವಿಧಾನ ಅಸಮರ್ಪಕ: ಹೋರಾಟಗಾರ ಆಂಬ್ರೋಸ್

Update: 2017-11-08 12:25 GMT

ನೋಟು ಅಮಾನ್ಯೀಕರಣಕ್ಕೆ ಅನುಸರಿಸಿದ ವಿಧಾನವೇ ಅಸಮರ್ಪಕವಾಗಿದ್ದು, ಸರ್ವಾಧಿಕಾರದ ಮಾದರಿಯಲ್ಲಿದೆ. ’ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಲೇಬಾರದೆಂಬ’ ನಮ್ಮ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯ ಧೋರಣೆಗೆ ವ್ಯತಿರಿಕ್ತವಾಗಿದ್ದು, ಈಗ ನನ್ನಂತಹ ಅನೇಕರು ತಮ್ಮ ತಪ್ಪಿಲ್ಲದೆಯೇ ಅನ್ಯಾಯಕ್ಕೆ ಸಿಲುಕಿದಂತಾಗಿದೆ.

ಹೊಸ ನೋಟುಗಳಲ್ಲಿ ಕನ್ನಡ/ತುಳು/ಮರಾಠಿ/ಮಲಯಾಳಂ/ಗುಜರಾತಿ/ಕಾಶ್ಮೀರಿ/ಬಂಗಾಲಿ.. ಇತ್ಯಾದಿ ಭಾಷೆಗಳ ಪದಪ್ರಮಾಣವು 2 ರಿಂದ 3 ಇದ್ದದ್ದನ್ನು ಹಾಗೇ ಉಳಿಸಿಕೊಂಡು ಹಿಂದಿಯ ಪದಪ್ರಮಾಣವನ್ನು ಮಾತ್ರ 39 ರಿಂದ 50 ಕ್ಕೆ ಹೆಚ್ಚಿಸಿರುವುದು ’ಹಿಂದಿ ಹೇರಿಕೆ’ ಮಾತ್ರವಲ್ಲದೆ ’ಒಂದು ದೇಶ ಒಂದು ಭಾಷೆ’ ಎಂಬ ಫ್ಯಾಶಿಸ್ಟ್ ಸಿದ್ಧಾಂತದ ಜಾರಿಗೂ ನೋಟು ರದ್ದತಿಯನ್ನು ಬಳಸಿಕೊಳ್ಳಲಾಗಿದೆ.

ನೋಟು ಅಮಾನ್ಯೀಕರಣದ ಬಗ್ಗೆ ಕಳೆದ ಒಂದು ವರ್ಷದಿಂದಲೂ ಶಾಸಕಾಂಗ/ಕಾರ್ಯಾಂಗ/ನ್ಯಾಯಾಂಗಗಳು ನಿರ್ಲಕ್ಷ್ಯ ವಹಿಸಿರುವುದು ಅಕ್ಷಮ್ಯ. ಆದ್ದರಿಂದಲೇ ನಾನು ನೋಟು ಆಂದೋಲನವನ್ನು ಹುಟ್ಟುಹಾಕಿ ಬಡವರ ಹಳೇನೋಟುಗಳನ್ನು ಬದಲಾಯಿಸಿಕೊಡುತ್ತಿದ್ದೇನೆ. ಈ ಹೋರಾಟವು ಕೇವಲ ಸಾರ್ವಜನಿಕರಿಗಲ್ಲದೆ ನೋಟು ಪ್ರಕರಣದ ನಂತರ ದಿಕ್ಕು ತೋಚದೆ ’ಮೌನ’ವಾಗಿರುವ ನ್ಯಾಯಾಲಯಕ್ಕೂ, ಕೇಂದ್ರ ಸರಕಾರಕ್ಕೂ ಹೊಸ ದಾರಿ ಸಿಗಬಹುದಾಗಿದೆ.

-ಆಂಬ್ರೋಸ್, ಏಕಾಂಗಿ ಮೌನ ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News