ಕೊಲ್ಲಿಯಲ್ಲಿ ಇರಾನ್ ಹಸ್ತಕ್ಷೇಪ ನಿಲ್ಲಲಿ: ಈಜಿಪ್ಟ್ ಅಧ್ಯಕ್ಷ

Update: 2017-11-09 16:43 GMT

ಕೈರೋ (ಈಜಿಪ್ಟ್), ನ. 9: ಮಧ್ಯಪ್ರಾಚ್ಯದಲ್ಲಿ ‘ಹಸ್ತಕ್ಷೇಪ’ ನಡೆಸುವುದನ್ನು ಇರಾನ್ ನಿಲ್ಲಿಸಬೇಕು ಹಾಗೂ ಕೊಲ್ಲಿ ಅರಬ್ ದೇಶಗಳ ಭದ್ರತೆಗೆ ಬೆದರಿಕೆ ಎದುರಾಗಬಾರದು ಎಂದು ಈಜಿಪ್ಟ್ ಅಧ್ಯಕ್ಷ ಅಬ್ದುಲ್-ಫತ್ತಾ ಅಲ್-ಸಿಸ್ಸಿ ಬುಧವಾರ ಹೇಳಿದ್ದಾರೆ.

ಆದರೆ, ತನಗೆ ಯುದ್ಧ ಬೇಕಿಲ್ಲ, ಕೊಲ್ಲಿ ವಲಯದ ಬಿಕ್ಕಟ್ಟನ್ನು ಮಾತುಕತೆಯ ಮೂಲಕ ಬಗೆಹರಿಸಬಹುದಾಗಿದೆ ಎಂಬ ನಂಬಿಕೆ ತನಗಿದೆ ಎಂದು ಅವರು ನುಡಿದರು.

ಯಮನ್‌ನಲ್ಲಿರುವ ಇರಾನ್ ಬೆಂಬಲಿತ ಬಂಡುಕೋರರು ಕಳೆದ ವಾರ ರಿಯಾದ್‌ನತ್ತ ಕ್ಷಿಪಣಿ ಹಾರಿಸಿದ ಹಿನ್ನೆಲೆಯಲ್ಲಿ ಈಜಿಪ್ಟ್ ಅಧ್ಯಕ್ಷರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಕ್ಷಿಪಣಿ ಹಾರಾಟಕ್ಕೆ ಇರಾನ್ ನೇರ ಹೊಣೆಯಾಗಿದೆ ಎಂಬುದಾಗಿ ಸೌದಿ ಅರೇಬಿಯ ಆರೋಪಿಸಿದೆ.

ಸೌದಿ ಅರೇಬಿಯದ ಪುರಾತತ್ವ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದು ದೇಶದ ‘ಮುನ್ನೋಟ 2030’ರ ಭಾಗವಾಗಿದೆ. ಪ್ರೇರಣೆಯ ಸೆಲೆ ಮತ್ತು ನಾಗರಿಕತೆಯ ತೊಟ್ಟಿಲು ಆಗಿರುವುದಕ್ಕೆ ಸೌದಿ ಅರೇಬಿಯಕ್ಕೆ ಹೆಮ್ಮೆಯಿದೆ.

ದೊರೆ ಸಲ್ಮಾನ್, ಸೌದಿ ಅರೇಬಿಯದ ದೊರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News