ಇಲ್ಲಿದ್ದಾನೆ ನೋಡಿ ‘ರಬ್ಬರ್ ಮ್ಯಾನ್ ಆಫ್ ಇಂಡಿಯಾ’

Update: 2017-11-11 11:01 GMT

ಈ ವಿಶ್ವದಲ್ಲಿ ಕೆಲವರು ವಿಶೇಷ ಸಾಮರ್ಥ್ಯಗಳನ್ನು ಹೊಂದಿರುತ್ತಾರೆ. ಆಯಸ್ಕಾಂತ ಶರೀರದಿಂದ ಹಿಡಿದು ವಿದ್ಯುತ್ ನಿರೋಧಕ ಶಕ್ತಿಯವರೆಗಿನ ಶರೀರಗಳನ್ನು ಹೊಂದಿದವರಿದ್ದಾರೆ. ಇಂತಹ ಸಾಮರ್ಥ್ಯಗಳು ಸಾಮಾನ್ಯ ಮನುಷ್ಯನ ಕಲ್ಪನೆಗೂ ಮೀರಿದ್ದಾಗಿವೆ. ಭಾರತದ ಜಸ್ಪ್ರೀತ್ ಸಿಂಗ್ ಕಾಲ್ರಾ ಎಂಬ 15ರ ಬಾಲಕ ಇಂತಹ ವಿಶೇಷ ವರ್ಗಕ್ಕೆ ಸೇರಿದ್ದಾನೆ.

ಪಂಜಾಬಿನ ಲೂಧಿಯಾನಾ ನಿವಾಸಿಯಾಗಿರುವ ಕಾಲ್ರಾ ತನ್ನ ಶರೀರವನ್ನು ಹೇಗೆ ಬೇಕಾದರೂ ಬಗ್ಗಿಸುವ,ತಿರುಗಿಸುವ ಸಾಮರ್ಥ್ಯ ಹೊಂದಿದ್ದಾನೆ.
‘ರಬ್ಬರ್ ಮ್ಯಾನ್ ಆಫ್ ಇಂಡಿಯಾ’ ಎಂದು ಹೆಸರಾಗಿರುವ ಕಾಲ್ರಾ ಈಗಾಗಲೇ ‘ಮೂಳೆರಹಿತ ಮಾನವ’ ಎಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದ್ದಾನೆ. ವಿಶಿಷ್ಟ ವಿಶ್ವ ದಾಖಲೆಗಳಲ್ಲಿ ‘ವರ್ಲ್ಡ್ಸ್ ಯಂಗೆಸ್ಟ್ ಫ್ಲೆಕ್ಸಿಬಲ್ ಬಾಯ್’ನಿಂದ ಹಿಡಿದು ಮಿರಾಕಲ್ಸ್ ವರ್ಲ್ಡ್ ರೆಕಾರ್ಡ್ಸ್‌ಗಳಲ್ಲಿ ‘ರಬ್ಬರ್ ಮ್ಯಾನ್ ಆಫ್ ದಿ ವರ್ಲ್ಡ್’ವರೆಗೆ ಹಲವು ಬಿರುದುಗಳಿಗೆ ಪಾತ್ರನಾಗಿದ್ದಾನೆ.

ತನ್ನ ಶರೀರವು ಹೇಗೆ ಬೇಕಾದರೂ ಬಗ್ಗುತ್ತದೆ, ತಿರುಗುತ್ತದೆ ಎನ್ನುವುದು ತನ್ನ 11ರ ಹರೆಯದಲ್ಲಿಯೇ ಕಾಲ್ರಾಗೆ ಗೊತ್ತಾಗಿತ್ತು. ತನ್ನ ಶಿಕ್ಷಕರ ಸಲಹೆಯಂತೆ ಯೋಗಾಭ್ಯಾಸ ವನ್ನು ಆರಂಭಿಸಿದ್ದ ಕಾಲ್ರಾ ಹಲವಾರು ಯೋಗ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದಾನೆ.

ಅಂದ ಹಾಗೆ ಹೀಗೆಲ್ಲ ಮಾಡುವಾಗ ಕಾಲ್ರಾಗೆ ಒಂದಿನಿತೂ ನೋವಾಗುವುದಿಲ್ಲ. ಸತತ ಅಭ್ಯಾಸದಿಂದಾಗಿ ಆತ ಈಗ ತನ್ನ ಕೈಗಳನ್ನು 360 ಡಿಗ್ರಿಗಳಷ್ಟು ತಿರುಗಿಸಬಲ್ಲ.

ಕಾಲ್ರಾನ ಸಾಮರ್ಥ್ಯವನ್ನು ಕಂಡು ದಂಗಾದ ವೈದ್ಯರು ಎಕ್ಸರೇ ಪರೀಕ್ಷೆಗೊಳಪಡಿಸಿ ಆತನ ಶರೀರವು ಸಹಜವಾಗಿದೆ ಮತ್ತು ಆರೋಗ್ಯಯುತವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಂಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News