ಕೆಪಿಎಂಇಎ ಕಾಯ್ದೆ ತಿದ್ದುಪಡಿ ಆರೋಗ್ಯ ಕ್ಷೇತ್ರಕ್ಕೆ ಹಿನ್ನಡೆ: ಡಾ.ಯೂಸುಫ್ ಕುಂಬ್ಳೆ

Update: 2017-11-12 04:49 GMT
ಡಾ. ಯೂಸುಫ್ ಕುಂಬ್ಳೆ
ಅಧ್ಯಕ್ಷರು, ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್ ಅಸೋಸಿಯೇಶನ್, ಮಂಗಳೂರು

ವಿಧಾನಸಭೆಯ ಮುಂಬರುವ ಅಧಿವೇಶನದಲ್ಲಿ ಕೆಪಿಎಂಇಎ ಕಾಯ್ದೆ 2017 (ತಿದ್ದುಪಡಿ)ಯನ್ನು ಅನುಷ್ಠಾನಕ್ಕೆ ತರುವ ಸಿದ್ಧತೆಗಳು ನಡೆದಿದೆ. ಆದರೆ ರಾಜ್ಯದ 60,000ಕ್ಕೂ ಅಧಿಕ ವೈದ್ಯರು ಮತ್ತು ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಐದು ಲಕ್ಷಕ್ಕೂ ಅಧಿಕ ಉದ್ಯೋಗಿಗಳು ಈ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಕೆಪಿಎಂಇಎ ಕಾಯ್ದೆಯನ್ನು ಸುಮ್ಮನೆ ಪ್ರತಿಭಟಿಸುತ್ತಿಲ್ಲ, ಸರಕಾರ ಅದನ್ನು ತಾನು ನೇಮಿಸಿದ ಜಸ್ಟೀಸ್ ವಿಕ್ರಂಜೀತ್ ಸೇನ್ ಸಮಿತಿ ನೀಡಿರುವ ಸಲಹೆಯಂತೆ ಜಾರಿಗೊಳಿಸಬೇಕು. ಸದ್ಯದ ರೂಪದಲ್ಲಿ ಈ ಕಾನೂನು ಕೇವಲ ಆರೋಗ್ಯಕ್ಷೇತ್ರದ ಉದ್ಯೋಗಿಗಳಿಗೆ ಮಾತ್ರವಲ್ಲ ರೋಗಿಗಳಿಗೂ ಹಾನಿಕರವಾಗಿದೆ ಎಂದು ಅಭಿಪ್ರಾಯಪಡುತ್ತಾರೆ ಹಿರಿಯ ವೈದ್ಯರಾದ ಡಾ. ಯೂಸುಫ್ ಕುಂಬ್ಳೆ. ಇದರ ಸಾಧಕ ಬಾಧಕಗಳನ್ನು ಅವರು ಪ್ರಶ್ನೆ, ಉತ್ತರಗಳ ರೂಪದಲ್ಲಿ ಓದುಗರ ಮುಂದೆ ತೆರೆದಿಟ್ಟಿದ್ದಾರೆ.

►ಕೆಪಿಎಂಇಎಯ ಪ್ರಸ್ತುತ ರೂಪದ ಬಗ್ಗೆ ವಿವಾದ ಯಾಕೆ?

♦ ಈ ಕಾನೂನು ಪ್ರಸಕ್ತ ರೂಪದಲ್ಲೇ ಜಾರಿಯಾದರೆ ರಾಜ್ಯದ 60, 000 ವೈದ್ಯರು ಮತ್ತು ಹತ್ತು ಲಕ್ಷಕ್ಕೂ ಅಧಿಕ ಪ್ಯಾರಾ ಮೆಡಿಕಲ್‌ಸಿಬ್ಬಂದಿ, ದಾದಿಯರು, ಮೆಡಿಕಲ್ ಸ್ಟೋರ್‌ಗಳ, ಆರೋಗ್ಯ ತಪಾಸಣಾ ಕೇಂದ್ರಗಳ ಮತ್ತು ಆಸ್ಪತ್ರೆಯ ಸಿಬ್ಬಂದಿ ಸಂಕಷ್ಟಕ್ಕೀಡಾ ಗಲಿದ್ದಾರೆ. ಈ ಕಾನೂನಿನ ಲಾಭ ಮತ್ತು ನಷ್ಟಗಳನ್ನು ಸರಿಯಾಗಿ ಗಮನಿಸಿದಾಗ ಈ ಅಂಶ ಸ್ಪಷ್ಟವಾಗುತ್ತದೆ. ಖಾಸಗಿ ಆಸ್ಪತ್ರೆಗಳು ತುಂಬಾ ದುಬಾರಿಯಾಗಿದ್ದು ಬಡವರಿಗೆ ಕೈಗೆಟಕುವುದಿಲ್ಲ ಎಂಬುದು ಒಂದು ಸಾಮಾನ್ಯ ದೃಷ್ಟಿಕೋನವಾ ಗಿದೆ. ಹಾಗಾಗಿ ಸರಕಾರ ಶಸ್ತ್ರಚಿಕಿತ್ಸೆ, ಅದರ ಪ್ರಕ್ರಿಯೆ, ರೋಗಪತ್ತೆ ಪರೀಕ್ಷೆಗಳು ಮತ್ತು ವೃತ್ತಿಪರ ದರಗಳ ಮೇಲೆ ನಿಯಂತ್ರಣ ಹೇರಲು ಒಂದು ವ್ಯವಸ್ಥೆಯನ್ನು ತರಲು ಪ್ರಯತ್ನಿಸುತ್ತಿದೆ.

►ಇದು ಸರಿಯಾದ ದಾರಿಯಲ್ಲಿ ಇಟ್ಟ ಹೆಜ್ಜೆಯಲ್ಲವೇ?

► ಭಾರತವು ಪ್ರಪಂಚದಲ್ಲಿ ಅಗ್ಗದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಹಾಗಾಗಿಯೇ ಇಲ್ಲಿ ವೈದ್ಯ ಕೀಯ ಪ್ರವಾಸೋದ್ಯಮ ಹೆಚ್ಚುತ್ತಿದೆ. ಭಾರತದ ಅತ್ಯಂತ ಅಗ್ಗದ ವೈದ್ಯಕೀಯ ವ್ಯವಸ್ಥೆಗೆ ವಿದೇಶಿಗರು ಆಕರ್ಷಿತರಾಗುತ್ತಿದ್ದಾರೆ. ವೈದ್ಯಕೀಯ ಸಾಧನಗಳ ದುಬಾರಿ ಬೆಲೆ, ಆಮದು ಸುಂಕ, ಬದ ಲಾಗುತ್ತಿರುವ ತಂತ್ರಜ್ಞಾನ, ಕನಿಷ್ಠ ವೇತನ ಕಾನೂನು, ವಾಣಿಜ್ಯ ಕಟ್ಟಡ ತೆರಿಗೆ, ವಿದ್ಯುತ್ ಮತ್ತು ನೀರಿನ ಬಿಲ್, ರೋಗಿಗಳಿಂದ ಹೆಚ್ಚುತ್ತಿರುವ ಬೇಡಿಕೆಗಳು ಮುಂತಾದುವುಗಳ ಹೊರತಾಗಿಯೂ ನಾವು ಅಗ್ಗದ ವೈದ್ಯಕೀಯ ಸೇವೆಯನ್ನು ಒದಗಿಸುತ್ತಿದ್ದೇವೆ. ಆದರೆ ಸರಕಾರ ಖಾಸಗಿ ಆಸ್ಪತ್ರೆಗಳಿಗೆ ಯಾವುದೇ ರೀತಿಯ ಸಬ್ಸಿಡಿ ಅಥವಾವಿನಾಯಿತಿ ದರಗಳನ್ನು ನೀಡುತ್ತಿಲ್ಲ. ಸರಕಾರಕ್ಕೆ ಚಿಕಿತ್ಸಾ ವೆಚ್ಚ ವನ್ನು ಕಡಿಮೆಗೊಳಿಸುವ ಉದ್ದೇಶವಿದ್ದರೆ ಅದು ಖಾಸಗಿ ಆಸ್ಪತ್ರೆಗಳಿಗೆ ತೆರಿಗೆ ಮತ್ತು ಇತರ ವಿಭಾಗಗಳಲ್ಲಿ ವಿನಾಯಿತಿ ನೀಡುವ ಬಗ್ಗೆ ಚಿಂತಿಸಲಿ.

► ರೋಗಪತ್ತೆ ಮತ್ತು ಪ್ರಕ್ರಿಯೆಗಳಿಗೆ ಸರಕಾರ ದರ ನಿಗದಿಪಡಿ ಸಿದರೆ ಸಾರ್ವಜನಿಕರಿಗೆ ಪಾರದರ್ಶಕ ಮತ್ತು ಪ್ರಾಮಾಣಿಕ ವಾಗಿರುತ್ತದೆಯಲ್ಲವೇ. ಅದನ್ನು ನೀವು ಯಾಕೆ ವಿರೋಧಿಸುತ್ತಿದ್ದೀರಾ?

♦ ಎಲ್ಲಾ ಆಸ್ಪತ್ರೆಗಳಲ್ಲೂ ದೊರಕುವ ಚಿಕಿತ್ಸೆಗಳ ದರಪಟ್ಟಿಯನ್ನು ಹಾಕ ಲಾಗಿರುತ್ತದೆ. ಆದರೆ ಮೂಲಭೂತ ಸೌಕರ್ಯ, ಸಾಧನಗಳ ರೀತಿ, ತಂತ್ರಜ್ಞಾನ, ಸೇವೆಯ ಗುಣಮಟ್ಟ, ವೈದ್ಯರ ಅರ್ಹತೆ ಮತ್ತು ಕೌಶಲ್ಯ, ಸಿಬ್ಬಂದಿಯ ಸಾಮರ್ಥ್ಯ ಮತ್ತು ಇತರ ಮಾನದಂಡಗಳನ್ನು ಅವಲಂಬಿಸಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ದರಗಳಲ್ಲಿ ವ್ಯತ್ಯಾಸವಿರುತ್ತದೆ. ಇದನ್ನು ಒಂದೇ ಆಗಿಸಲು ಸಾಧ್ಯವಿಲ್ಲ.

ಅದಕ್ಕೂ ಮಿಗಿಲಾಗಿ, ಹಲವು ಪ್ರಕ್ರಿಯೆಗಳು ಪೂರ್ವಯೋಜಿತ ವಾಗಿರುವುದಿಲ್ಲ ಹಾಗಾಗಿ ಅವುಗಳನ್ನು ಒಂದು ಪ್ಯಾಕೇಜ್ ಆಗಿ ನೀಡಲು ಸಾಧ್ಯವಿಲ್ಲ. ದಾಖಲಾತಿಯ ವೇಳೆ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಆಸ್ಪತ್ರೆಗಳು ಸಂಪೂರ್ಣವಾಗಿ ಮೊದಲೇ ತಿಳಿದುಕೊ ಳ್ಳಲು ಸಾಧ್ಯವಿಲ್ಲ. ಯಾವುದೇ ಆರೋಗ್ಯ ಸಂಬಂಧಿ ಪ್ರಕ್ರಿಯೆ ಮತ್ತು ತನಿಖೆಯ ವೆಚ್ಚವನ್ನು ಮೊದಲೇ ತಿಳಿಸುವಂಥಾ ಯಾವುದೇ ವೈಜ್ಞಾನಿಕ ವಿಧಾನ ಕೂಡಾ ಇಲ್ಲ. ಹಾಗಾಗಿ ಎಲ್ಲಾ ಸೇವೆಗಳು ಮತ್ತು ಎಲ್ಲಾ ಪರಿಸ್ಥಿತಿಗಳ ದರವನ್ನು ಪ್ರಕಟಿಸಲು ಸಾಧ್ಯವಿಲ್ಲ. ಆದಾಗ್ಯೂ, ಅನೇಕ ಖಾಸಗಿ ಆಸ್ಪತ್ರೆಗಳು ತಮ್ಮ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಸಿಜಿಎಚ್‌ಎಸ್/ ಇಎಸ್‌ಐ ರೋಗಿಗಳಿಗೆ ಸರಕಾರ ನಿಗದಿಪಡಿಸಿದ ದರದಲ್ಲಿ ಚಿಕಿತ್ಸೆ ನೀಡುತ್ತಿವೆ.

ಶ್ರೀಮಂತ ಮತ್ತು ಕೊಳ್ಳಲು ಶಕ್ತರಾದ ರೋಗಿಗಳಿಂದ ಪಡೆದ ದುಬಾರಿ ದರಗಳನ್ನು ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಬಡವರಿಗೆ ಕೈಗೆಟ ಕುವ ದರದಲ್ಲಿ ಚಿಕಿತ್ಸೆ ನೀಡಲು ಬಳಸುತ್ತದೆ. ಎಲ್ಲಾ ರೋಗಿಗಳಿಗೂ ಒಂದೇ ದರವನ್ನು ನಿಗದಿಪಡಿಸಲು ಸರಕಾರ ಯೋಚಿಸಿದರೆ ಈ ಆಸ್ಪತ್ರೆಗಳು ಒಂದು ತಿಂಗಳು ಕೂಡಾ ಉಳಿಯಲಾರವು. ಇದು ಈಗಾಗಲೇ ಕುಸಿದಿರುವ ದೇಶದ ಖಾಸಗಿ ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಕುಸಿಯುವಂತೆ ಮಾಡಲಿದೆ.

►ಈ ಕಾನೂನು ದುರಂತ ಎಂದು ನೀವ್ಯಾಕೆ ಯೋಚಿಸುತ್ತೀರಿ?

♦ 1. ರಾಜ್ಯದಲ್ಲಿ ಶೇಕಡಾ 80 ಆರೋಗ್ಯ ಸೇವೆಯನ್ನು ಖಾಸಗಿ ಆಸ್ಪತ್ರೆ ಗಳು ನೀಡುತ್ತಿದ್ದು ಈ ಕಾನೂನಿನಿಂದ ಬಹುತೇಕ ಖಾಸಗಿ ಆಸ್ಪತ್ರೆ ಗಳು ಮುಚ್ಚುಗಡೆಯಾಗಲಿವೆ. ಸರಕಾರಿ ಆಸ್ಪತ್ರೆಗಳು ಶೇಕಡಾ 10 ಭಾರವನ್ನು ತೆಗೆದುಕೊಳ್ಳಲೂ ಸಿದ್ಧವಾಗಿಲ್ಲ.

2. ಐದು ಲಕ್ಷಕ್ಕಿಂತಲೂ ಅಧಿಕ ವೈದ್ಯರು ಮತ್ತು ಆರೋಗ್ಯ ಸಂಬಂಧಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ.

3. ಬಹುತೇಕ ನುರಿತ ಮತ್ತು ಸೂಪರ್ ಸ್ಪೆಷಲಿಸ್ಟ್ ವೈದ್ಯರು ಇತರ ರಾಜ್ಯಗಳಿಗೆ ಹಾಗೂ ವಿದೇಶಗಳಿಗೆ ಪಲಾಯನ ಮಾಡುತ್ತಾರೆ. ಸದ್ಯಕ್ಕೆ ಕರ್ನಾಟದ ಹಲವು ಜಿಲ್ಲೆಗಳಲ್ಲಿ ಒಂದೇ ಒಂದು ಸೂಪರ್ ಸ್ಪೆಷಲಿಸ್ಟ್ ವೈದ್ಯರುಗಳೇ ಇಲ್ಲ. ಗ್ರಾಮ/ತಾಲೂಕು/ ಜಿಲ್ಲಾ ಮಟ್ಟಗಳಲ್ಲಿ ಯಾವ ಹೊಸ ವೈದ್ಯ ಕೂಡಾ ಹೊಸ ಕ್ಲಿನಿಕ್‌ಗಳನ್ನು/ ಆಸ್ಪತ್ರೆಗಳನ್ನು ತೆರೆಯುವುದಿಲ್ಲ. ಕರ್ನಾಟಕದ ಇತಿಹಾಸದಲ್ಲೇ ಇದೊಂದು ಕೆಟ್ಟ ನಿರ್ಣಯವಾಗಲಿದೆ.

► ಹಾಗಾದರೆ ಸರಕಾರವು ಈ ಕಾನೂನನ್ನು ಜಾರಿ ಮಾಡಲು ಅಷ್ಟೊಂದು ಆತುರ ಪ್ರದರ್ಶಿಸುತ್ತಿರುವುದಾದರೂ ಯಾಕೆ?

♦ ಅದಕ್ಕೆ ಕಾರಣಗಳು ಹೀಗಿರಬಹುದು;

1. ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಸ್ಥಾಪಿತ ಹಿತಾಸಕ್ತಿಗಳು ಸರಕಾರದ ಮೇಲೆ ಪ್ರಭಾವವನ್ನು ಬೀರುತ್ತಿರಬಹುದು.

2. ಸಣ್ಣ ಆಸ್ಪತ್ರೆಗಳು ಮತ್ತು ಸಣ್ಣ ವೈದ್ಯಕೀಯ ಸಂಸ್ಥೆಗಳನ್ನು ಮುಚ್ಚುವ ಮೂಲಕ ಮಾರುಕಟ್ಟೆಯ ಮೇಲೆ ಅಧಿಪತ್ಯ ಸ್ಥಾಪಿಸಬೇಕೆಂಬ ದೃಷ್ಟಿಕೋನದಿಂದ ಯಾವುದೋ ಕೆಲವು ಬಹುರಾಷ್ಟ್ರೀಯ ಕಾರ್ಪೊರೇಟ್ ಆಸ್ಪತ್ರೆಗಳು ಸರಕಾರದ ಮೇಲೆ ಪ್ರಭಾವ ಹಾಕುತ್ತಿರಬಹುದು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ