ವಾಯುಮಾಲಿನ್ಯ: ನ್ಯೂಯಾರ್ಕ್- ದೆಹಲಿ ವಿಮಾನ ರದ್ದು

Update: 2017-11-12 03:52 GMT

ಹೊಸದಿಲ್ಲಿ, ನ. 12: ರಾಜಧಾನಿಯಲ್ಲಿ ವಾಯುಮಾಲಿನ್ಯ ಮಿತಿಮೀರಿರುವ ಹಿನ್ನೆಲೆಯಲ್ಲಿ ನ್ಯೂಯಾರ್ಕ್- ದೆಹಲಿ ವಿಮಾನವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ಯುನೈಟೆಡ್ ಏರ್‌ಲೈನ್ಸ್ ಪ್ರಕಟಿಸಿದೆ.

ಮಾಲಿನ್ಯ ಮಟ್ಟ ಮಿತಿಮೀರಿದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ರದ್ದಾಗಿರುವುದು ಇದೇ ಮೊದಲು.

ಹಲವು ದಿನಗಳಿಂದ ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ ’ತೀವ್ರ’ ವರ್ಗ ತಲುಪಿದೆ. "ವಾಯುಮಾಲಿನ್ಯ ಮಿತಿಮೀರಿರುವ ಹಿನ್ನೆಲೆಯಲ್ಲಿ ಯುನೈಟೆಡ್ ಏರ್‌ಲೈನ್ಸ್, ನ್ಯೂಯಾರ್ಕ್- ದೆಹಲಿ ವಿಮಾನವನ್ನು ತಾತ್ಕಾಲಿಕವಾಗಿ ರದ್ದುಪಡಿಸಿದೆ" ಎಂದು ಸಂಸ್ಥೆಯ ವಕ್ತಾರ ಹೇಳಿಕೆ ನೀಡಿದ್ದಾರೆ. ನ್ಯೂಯಾರ್ಕ್‌ನಿಂದ ದೆಹಲಿಗೆ ತೆರಳುವ ವಿಮಾನ (ಯುಎ 082)ನ್ನು ತೀವ್ರ ಹವಾಮಾನ ಪರಿಸ್ಥಿತಿಯಿಂದ ರದ್ದು ಮಾಡಲಾಗಿದೆ ಎಂದು ಕಂಪನಿಯ ವೆಬ್‌ಸೈಟ್ ಹೇಳಿದೆ.

ಈ ಸಂಸ್ಥೆ ನ್ಯೂಯಾರ್ಕ್‌ನಿಂದ ದೆಹಲಿ ಮತ್ತು ಮುಂಬೈಗೆ ವಿಮಾನಯಾನ ಸೌಲಭ್ಯ ಒದಗಿಸುತ್ತಿದೆ. "ನಮ್ಮ ಉದ್ಯೋಗಿಗಳ ಸುರಕ್ಷೆ ದೃಷ್ಟಿಯಿಂದ ದೆಹಲಿಯಲ್ಲಿ ನಮ್ಮ ಹೊರಾಂಗಣ ಕೆಲಸಗಳನ್ನು ಕೂಡಾ ಮುಚ್ಚಲಾಗುತ್ತದೆ. ನಿಮ್ಮ ಪ್ರವಾಸ ಯೋಜನೆಯನ್ನು ಬದಲಿಸಿಕೊಳ್ಳುವ ಹೆಚ್ಚುವರಿ ಸೌಲಭ್ಯವನ್ನು ನೀಡಲಾಗುತ್ತಿದೆ" ಎಂದು ವಿವರಿಸಿದೆ.

"ಪ್ರವಾಸ ಮುಂದುವರಿಸುವುದಾದರೆ ವಿಮಾನದ ಸ್ಥಿತಿಗತಿಯ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪರಿಶೀಲಿಸುವಂತೆ ಸೂಚಿಸಿದೆ. ಈ ಕುರಿತ ಎಸ್‌ಎಂಎಸ್ ಸಂದೇಶಕ್ಕೆ ಸೈನ್ ಅಪ್ ಮಾಡುವಂತೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News