ಟ್ರಂಪ್ ಫಿಲಿಪ್ಪೀನ್ಸ್ ಭೇಟಿ ವಿರುದ್ಧ ಭಾರೀ ಪ್ರತಿಭಟನೆ

Update: 2017-11-12 14:33 GMT

 ಮನಿಲಾ (ಫಿಲಿಪ್ಪೀನ್ಸ್), ನ. 12: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫಿಲಿಪ್ಪೀನ್ಸ್‌ಗೆ ಭೇಟಿ ನೀಡುವುದನ್ನು ವಿರೋಧಿಸಿ ದೇಶದಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ.

ರವಿವಾರ ರಾಜಧಾನಿ ಮನಿಲಾದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮುಂದೆ ಸೇರಿದ ನೂರಾರು ಮಂದಿಯನ್ನು ಚದುರಿಸಲು ಪೊಲೀಸರು ಜಲಫಿರಂಗಿ ಬಳಸಿದರು.

ತನ್ನ ಏಶ್ಯ ಪ್ರವಾಸದ ಕೊನೆಯ ಹಂತವಾಗಿ ಟ್ರಂಪ್ ಫಿಲಿಪ್ಪೀನ್ಸ್‌ನಲ್ಲಿ ನಡೆಯಲಿರುವ ಆಸಿಯಾನ್ (ಆಗ್ನೇಯ ಏಶ್ಯ ದೇಶಗಳ ಒಕ್ಕೂಟ) ಶೃಂಗಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

‘ಟ್ರಂಪ್‌ರನ್ನು ದಬ್ಬಿ’ ಮತ್ತು ‘ಅಮೆರಿಕ ಸಾಮ್ರಾಜ್ಯಶಾಹಿಗೆ ಧಿಕ್ಕಾರ’ ಎಂಬ ಫಲಕಗಳನ್ನು ಪ್ರದರ್ಶಿಸಿದ ಎಡಪಂಥೀಯ ಪ್ರತಿಭಟನಕಾರರನ್ನು ಪೊಲೀಸರು ತಡೆದರು ಹಾಗೂ ಅವರ ಮೇಲೆ ಜಲಫಿರಂಗಿ ಬಳಸಿದರು.

‘‘ಟ್ರಂಪ್ ಅಮೆರಿಕದ ಸಾಮ್ರಾಜ್ಯಶಾಹಿ ಸರಕಾರದ ಸಿಇಒ ಆಗಿದ್ದಾರೆ’’ ಎಂದು ಪ್ರತಿಭಟನಕಾರರು ಘೋಷಿಸಿದರು.

‘‘ಅಮೆರಿಕ ಮತ್ತು ಫಿಲಿಪ್ಪೀನ್ಸ್‌ಗಳ ನಡುವೆ ಅನುಚಿತ ಒಪ್ಪಂದಗಳನ್ನು ಹೇರುವುದಕ್ಕಾಗಿ ಅವರು ಇಲ್ಲಿದ್ದಾರೆ ಎಂದು ನಮಗೆ ಗೊತ್ತು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News