×
Ad

ಸಂಸತ್‌ನಲ್ಲಿ ವರದಿ ಸಲ್ಲಿಸಿದರೆ ಮಾತ್ರ ಕಾಶ್ಮೀರಕ್ಕೆ ವಿಶೇಷ ಪ್ರತಿನಿಧಿ ನೇಮಕ ಸಾಧ್ಯ: ಫಾರೂಕ್ ಅಬ್ದುಲ್ಲಾ

Update: 2017-11-12 22:41 IST

ಶ್ರೀನಗರ, ನ.12: ದಿನೇಶ್ವರ್ ಶರ್ಮಾ ಅವರ ಅಂತಿಮ ವರದಿಯನ್ನು ಸಂಸತ್‌ನ ಎರಡೂ ಮನೆಗಳಲ್ಲಿ ನಿರ್ಣಯಕ್ಕೆ ಮಂಡಿಸಿದರೆ ಮಾತ್ರ ಕಾಶ್ಮೀರಕ್ಕೆ ವಿಶೇಷ ಪ್ರತಿನಿಧಿಯನ್ನು ನೇಮಿಸುವ ಕೇಂದ್ರದ ಪ್ರಯತ್ನವನ್ನು ಮುಂದುವರಿಸಬಹುದು ಎಂದು ನ್ಯಾಶನಲ್ ಕಾಂನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.

ಶರ್ಮಾರನ್ನು ಕಾಶ್ಮೀರದ ವಿಷಯದ ಬಗ್ಗೆ ಮಾತುಕತೆಗಾಗಿ ವಿಶೇಷ ಪ್ರತಿನಿಧಿಯಾಗಿ ನೇಮಿಸುವ ಮೂಲಕ ಕೇಂದ್ರ ಸರಕಾರ ಏನನ್ನು ಸಾಧಿಸಲು ಹೊರಟಿದೆ ಎಂಬುದನ್ನು ವಿವರಿಸಬೇಕೆಂದು ಕಣಿವೆ ರಾಜ್ಯದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಅಬ್ದುಲ್ಲಾ ತಿಳಿಸಿದ್ದಾರೆ.

ವಿವಿಧ ಕಡೆಗಳಿಂದ ಎದ್ದಿರುವ ಭಿನ್ನಾಭಿಪ್ರಾಯಗಳು ಶರ್ಮಾರನ್ನು ಮಾತುಕತೆಯ ಆರಂಭಕ್ಕೂ ಮುನ್ನವೇ ನಗಣ್ಯ ಸ್ಥಿತಿಗೆ ತಂದಿದೆ. ತಾನು ಮಾತುಕತೆಯ ವಿರೋಧಿಯಲ್ಲ ಆದರೆ ಕೇಂದ್ರದ ನಡೆಯಲ್ಲಿ ಪಾರದರ್ಶಕತೆಯಿರಬೇಕು ಎಂದು 80ರ ಹರೆಯದ ಫಾರೂಕ್ ಅಬ್ದುಲ್ಲಾ ತಿಳಿಸಿದರು.

ಶರ್ಮಾ ಕಣಿವೆ ರಾಜ್ಯಕ್ಕೆ ಆಗಮಿಸುವ ಮುನ್ನವೇ ಹೊಸದಿಲ್ಲಿಯಲ್ಲಿ ಅವರ ಬಗ್ಗೆ ಭಿನ್ನಾಭಿಪ್ರಾಯಗಳು ಕೇಳಿಬಂದಿವೆ. ಸಚಿವ ಜಿತೇಂದ್ರ ಸಿಂಗ್ ಕೂಡಾ ಶರ್ಮಾ ಒಬ್ಬ ಸಂವಾದಕ ಅಲ್ಲ ಎಂದು ಹೇಳಿದ್ದಾರೆ. ಕಾಶ್ಮೀರದಲ್ಲಿ ಶರ್ಮಾರ ನೇಮಕದ ಬಗ್ಗೆ ಯಾರಿಗೂ ಸ್ಪಷ್ಟತೆಯಿಲ್ಲ. ಹಾಗಾಗಿ ಅವರ ಉದ್ದೇಶ ಮತ್ತು ಅವರು ಏನು ಮಾಡಲು ಹೊರಟಿದ್ದಾರೆ ಎಂಬ ಬಗ್ಗೆ ನಮಗೆ ಗೊಂದಲವಿದೆ ಎಂದು ಅಬ್ದುಲ್ಲಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News