ಹಾದಿಯಾ ಎದುರಿಸುತ್ತಿರುವ ಪರಿಸ್ಥಿತಿ ಚೆನ್ನಾಗಿಲ್ಲ: ಕೇರಳ ಮಹಿಳಾ ಆಯೋಗ

Update: 2017-11-15 06:50 GMT

ತಿರುವನಂತಪುರಂ,ನ.25: ಹಾದಿಯಾರನ್ನು ರಾಷ್ಟ್ರೀಯ ಮಹಿಳಾ ಆಯೋಗ ಸಂದರ್ಶಿಸಿದಾಗ ಇಲ್ಲದಿರುವ ಬೆದರಿಕೆ ರಾಜ್ಯ ಮಹಿಳಾ ಆಯೋಗ ಸಂದರ್ಶಿಸಿದರೆ ಏಕೆ ಇರುತ್ತದೆ ಎಂದು ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ಎಂಸಿ ಜೊಸೆಫೈನ್ ಪ್ರಶ್ನಿಸಿದ್ದಾರೆ. ಹಾದಿಯಾಗೆ ಇಷ್ಟವಿರುವವರನ್ನು ಅವರ ಭೇಟಿಗೆ ಅನುಮತಿಸುತ್ತಿದ್ದೀರಾ ಅಥವಾ  ತಂದೆಗೆ ಇಷ್ಟವಿರುವವರನ್ನು  ಭೇಟಿ ಮಾಡಲು ಮೂತ್ರ ಅನುಮತಿಸುತ್ತಿದ್ದೀರಾ ಎನ್ನುವುದನ್ನು ಸ್ಪಷ್ಟಪಡಿಸಬೇಕೆಂದು ಜೊಸೆಫೈನ್ ಒತ್ತಾಯಿಸಿ.

ಹಾದಿಯಾ ಎದುರಿಸುತ್ತಿರುವ ಈಗಿನ ಪರಿಸ್ಥಿತಿ ತೃಪ್ತಿಕರವಾಗಿಲ್ಲ. ಅದು ಕಾನೂನು ವ್ಯವಸ್ಥೆಯೊಂದಿಗೆ ಸವಾಲು  ಆಗಿದೆ. ಹಾದಿಯಾ ಕೋರ್ಟಿನಲ್ಲಿ ಹಾಜರಾಗುವ ನವೆಂಬರ್ 27ರ ನಂತರ ಮನೆಯೊಳಗಿನ ಈ ಅವಸ್ಥೆ ಮುಂದುವರಿಯಬಾರದು. ಕೋರ್ಟು ಯಾವ ತೀರ್ಮಾನ ಕೈಗೊಂಡರೂ ಆ ನಂತರ ಯಾವುದೇ ಒತ್ತಡವೋ, ಇಂತಹ ನಿಯಂತ್ರಣಗಳೋ ಹಾದಿಯಾರ ವಿರುದ್ಧ ಇರಬಾರದು. ಇತರರೊಂದಿಗೆ ಮಾತಾಡುವ ಬೆರೆಯುವ ಸ್ವಾತಂತ್ರ್ಯ ಹಾದಿಯಾಗೆ ಇರಬೇಕು ಎಂದು ತಿರುವನಂತಪುರಂ ಅತಿಥಿ ಮಂದಿರದಲ್ಲಿ ನಡೆದ ಮಹಿಳಾ ಆಯೋಗ ಅದಾಲತ್‍ನಲ್ಲಿ ಪತ್ರಕರ್ತರೊಂದಿಗೆ ಆಯೋಗ ಅಧ್ಯಕ್ಷೆ ಜೊಸೆಫೈನ್ ಹೇಳಿದರು.

ಹಾದಿಯಾ ಸುರಕ್ಷಿತರಿದ್ದಾರೆಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದ್ದನ್ನು ನಾನು ಶೇ. 100ರಷ್ಟು ಒಪ್ಪುತ್ತೇನೆ. ಎಲ್ಲ ರೀತಿಯ ಭದ್ರತೆಯನ್ನು ಸರಕಾರ ಒದಗಿಸುತ್ತಿದೆ. ಆದರೆ, ಹಾದಿಯಾ ಸಂತೃಪ್ತಿ ಮತ್ತು ಸಂತೋಷದಿಂದಿದ್ದಾರೆ ಎಂದು ಹೇಗೆ ಹೇಳಲು ಸಾಧ್ಯ?. ಅದರ ಕುಟುಂಬವೇ ಇದನ್ನು ದೃಢಪಡಿಸಬೇಕಾಗಿದೆ. ಇದನ್ನು ಹೇಳುವಾಗ ಮಗಳ ಸುರಕ್ಷೆಗೆ ಸಂಬಂಧಿಸಿದ ತಂದೆತಾಯಿಯರ ಸಹಜ ಆತಂಕವನ್ನು ಮಹಿಳಾ ಆಯೋಗ ಶೇ.100ರಷ್ಟು ಅಂಗೀಕರಿಸುತ್ತದೆ. ರಾಷ್ಟ್ರೀಯ ಆಯೋಗ ಸಂದೇಹ ಪಟ್ಟಂತೆ ಮಹಿಳಾ ಆಯೋಗ ಪ್ರಕರಣದಲ್ಲಿ ಮಧ್ಯಪ್ರವೇಶಿಸಿಲ್ಲ ಎನ್ನುವುದು ಸರಿಯಲ್ಲ. ಗರಿಷ್ಠ ಮತ್ತು ಪ್ರಮಾಣಿಕವಾಗಿ ಈ ವಿಷಯದಲ್ಲಿ ಆಯೋಗ ಮಧ್ಯಪ್ರವೇಶಿಸಿದೆ ಎಂದು ಜೊಸೆಫೈನ್ ಹೇಳಿದ್ದಾರೆ.

ಅದೇ ವೇಳೆ ಪ್ರಕರಣದಲ್ಲಿ ಹಾದಿಯಾರ ತಂದೆ ಹಾದಿಯಾರನ್ನು ಭೇಟಿಯಾಗಲು  ಮಹಿಳಾ ಆಯೋಗ ಅಧ್ಯಕ್ಷೆ ಎಂಸಿ ಜೊಸೆಫೈನ್‍ಗೆ ಅನುಮತಿ ನೀಡಿಲ್ಲ ಎಂದು  ಆಯೋಗ ತಿಳಿಸಿದೆ. ಆಯೋಗ ಅಧ್ಯಕ್ಷೆಯ ಸಂದರ್ಶನದ ಕುರಿತು ತಿಳಿಸಲು ಬಂದ ಪೊಲೀಸ್ ಅಧಿಕಾರಿಯೊಂದಿಗೆ ಹಾದಿಯಾರ ತಂದೆ ಇದು ತನಗಿಷ್ಟವಿಲ್ಲ ಎಂದಿದ್ದಾರೆ. ಆದ್ದರಿಂದ ಅಧ್ಯಕ್ಷೆ ಪೊಲೀಸರೊಡನೆ ಇದಕ್ಕೆ ಸಂಬಂಧಿಸಿದ ವರದಿಯನ್ನು   ಕೇಳಿದ್ದಾರೆಂದು ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.

ಹಾದಿಯಾರನ್ನು ವಿಮಾನದ ಮೂಲಕ ಸುಪ್ರೀಂಕೋರ್ಟಿಗೆ ಹಾಜರುಪಡಿಸಲು ಮಹಿಳಾ ಆಯೋಗದ ಮೊರೆ ಹೋದ ಶೆಫಿನ್ ಜಹಾನ್

 ಹಾದಿಯಾರನ್ನು ಸುಪ್ರೀಂಕೋರ್ಟಿನಲ್ಲಿ ಹಾಜರು ಪಡಿಸಲು ವಿಮಾನದಲ್ಲಿ ಕರೆದೊಯ್ಯುವಂತೆ ಆಕೆಯ ಪತಿ ಶೆಫಿನ್ ಜಹಾನ್ ರಾಜ್ಯ ಮಹಿಳಾ ಆಯೋಗದ ಮೊರೆ ಹೋಗಿದ್ದಾರೆ. ರೈಲು ಪ್ರಯಾಣದ ವೇಳೆ ಹಾದಿಯಾರ ಸುರಕ್ಷೆ ಅಥವಾ ಸಾಕ್ಷ್ಯ ಬದಲಾಯಿಸಲು ಒತ್ತಡವೋ ಉಂಟಾಗುವ ಸಾಧ್ಯತೆ ಇದೆ. ಆದರೆ, ಹಾದಿಯಾರನ್ನು ಹಾಜರುಪಡಿಸಲು  ಸುಪ್ರೀಂಕೋರ್ಟು ತಂದೆಗೆ ಸೂಚಿಸಿದ್ದು, ಹೇಗೆ ಪ್ರಯಾಣಿಸಬೇಕೆಂದು ತಂದೆ ಅಶೋಕನ್ ತೀರ್ಮಾನಿಸುತ್ತಾರೆ.  ಎಲ್ಲೇ ಆದರೂ ಹಾದಿಯಾಗೆ ಸರಕಾರ ಸುರಕ್ಷೆ ಒದಗಿಸುತ್ತದೆ ಎಂದು ಆಯೋಗದ ಅಧ್ಯಕ್ಷೆ ಎಂ.ಸಿ. ಜೊಸೆಫೈನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News