ಉತ್ತರ ಕೊರಿಯಕ್ಕೆ ಚೀನಾ ರಾಯಭಾರಿ

Update: 2017-11-15 17:51 GMT

ಬೀಜಿಂಗ್, ನ. 15: ಉತ್ತರ ಕೊರಿಯಕ್ಕೆ ಉನ್ನತ ದರ್ಜೆಯ ವಿಶೇಷ ರಾಯಭಾರಿಯೊಬ್ಬರನ್ನು ತಾನು ಕಳುಹಿಸುವುದಾಗಿ ಚೀನಾ ಬುಧವಾರ ಹೇಳಿದೆ.

ಉತ್ತರ ಕೊರಿಯದ ಪರಮಾಣು ಅಸ್ತ್ರಗಳ ಮಹತ್ವಾಕಾಂಕ್ಷೆಯ ಹಿನ್ನೆಲೆಯಲ್ಲಿ, ನೆರೆಯ ದೇಶಗಳ ನಡುವಿನ ಸಂಬಂಧದಲ್ಲಿ ಬಿರುಕು ಹೆಚ್ಚುತ್ತಿರುವಂತೆಯೇ ಚೀನಾ ಈ ಕ್ರಮ ತೆಗೆದುಕೊಂಡಿದೆ.

 ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಅಂತಾರಾಷ್ಟ್ರೀಯ ವಿಭಾಗದ ಮುಖ್ಯಸ್ಥ ಸೊಂಗ್ ತಾವೊ ಶುಕ್ರವಾರ ಉತ್ತರ ಕೊರಿಯ ರಾಜಧಾನಿ ಪ್ಯಾಂಗ್‌ಯಾಂಗ್‌ಗೆ ಪ್ರಯಾಣಿಸಲಿದ್ದಾರೆ. ಕಳೆದ ತಿಂಗಳು ನಡೆದ ಪಕ್ಷದ ರಾಷ್ಟ್ರೀಯ ಕಾಂಗ್ರೆಸ್‌ನ ನಿರ್ಣಯಗಳ ಕುರಿತ ವರದಿಯೊಂದನ್ನು ಅವರು ಉತ್ತರ ಕೊರಿಯ ನಾಯಕತ್ವಕ್ಕೆ ಸಲ್ಲಿಸಲಿದ್ದಾರೆ ಎಂದು ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನುವ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News