ಕೇಂದ್ರ ಸಚಿವ ರಾಮ್‌ದಾಸ್ ಅಠಾವಳೆಗೆ ಮಾತೃವಿಯೋಗ
Update: 2017-11-16 18:22 IST
ಮುಂಬೈ, ನ.16: ಕೇಂದ್ರ ಸಚಿವ ರಾಮ್‌ದಾಸ್ ಅಠಾವಳೆ ಅವರ ತಾಯಿ ಹೌಸಾಬಾಯಿ ಬಂದು ಅಠವಳೆ ನಿನ್ನೆ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಅನಾರೋಗ್ಯ ಪೀಡಿತರಾಗಿದ್ದ ಹೌಸಾಬಾಯಿಯವರನ್ನು ಚಿಕಿತ್ಸೆಗಾಗಿ ಬಾಂಡ್ರಾದಲ್ಲಿರುವ ಗುರು ನಾನಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಬಗ್ಗೆ ಮಾಹಿತಿ ನೀಡಿದ ರಾಮ್‌ದಾಸ್‌ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಮಯೂರ್ ಬೋರ್ಕರ್, ಅವರು ನಿನ್ನೆ ಬೆಳಗ್ಗೆ ಏಳು ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ತಿಳಿಸಿದ್ದಾರೆ.
ಅವರ ಅಂತಿಮ ಸಂಸ್ಕಾರವನ್ನು ಬಾಂಡ್ರಾದ ಕೆರ್ವಾಡಿ ಸ್ಮಶಾನದಲ್ಲಿ ಸಂಜೆ ಮೂರು ಗಂಟೆಗೆ ನೆರವೇರಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಆಡಳಿತಾರೂಡ ಬಿಜೆಪಿ ನೇತೃತ್ವದ ಎನ್‌ಡಿಎಯ ಮೈತ್ರಿ ಪಕ್ಷವಾಗಿರುವ ಭಾರತೀಯ ಗಣರಾಜ್ಯ ಪಕ್ಷದ (ಅಠವಳೆ) ಮುಖ್ಯಸ್ಥರಾಗಿರುವ ರಾಮ್‌ದಾಸ್ ಅಠವಳೆ ಕೇಂದ್ರದಲ್ಲಿ ಸಾಮಾಜಿಕ ನ್ಯಾಯ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.