‘ಭಾರತ-ಶ್ರೀಲಂಕಾದ ನಿರಂತರ ಕ್ರಿಕೆಟ್ ಬೇಸರ ತರಿಸಬಹುದು’

Update: 2017-11-16 18:36 GMT

ಕೋಲ್ಕತಾ, ನ.16: ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ನಿರಂತರ ಕ್ರಿಕೆಟ್ ನಡೆದರೆ ಬೇಸರ ತರಿಸಬಹುದು ಎಂದು ಶ್ರೀಲಂಕಾ ಮಾಜಿ ಬ್ಯಾಟ್ಸ್ ಮನ್ ರಸೆಲ್ ಅರ್ನಾಲ್ಡ್ ಹೇಳಿದ್ದಾರೆ. ಈಮೂಲಕ ಭಾರತದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಕ್ಕೆ ಧ್ವನಿಗೂಡಿಸಿದ್ದಾರೆ. ಮೂರು ತಿಂಗಳಲ್ಲಿ ಶ್ರೀಲಂಕಾ ತಂಡ ಭಾರತ ವಿರುದ್ಧ ಮತ್ತೊಂದು ದ್ವಿಪಕ್ಷೀಯ ಸರಣಿ ಆಡುತ್ತಿರುವುದು ಎಲ್ಲರಿಗೂ ಬೇಸರ ಉಂಟು ಮಾಡಬಹುದು ಎಂದು ಕೊಹ್ಲಿ ಬುಧವಾರ ಹೇಳಿದ್ದರು. ‘‘ಕೊಹ್ಲಿ ಅಭಿಪ್ರಾಯ ಸತ್ಯ...ನಿರಂತರ ಕ್ರಿಕೆಟ್ ಬೋರ್ ಆಗಬಹುದು. ವಿವಿಧ ತಂಡಗಳ ವಿರುದ್ಧ ಆಡುವುದರಿಂದ ಬೇಸರವನ್ನು ಕಡಿಮೆ ಮಾಡಬಹುದು’’ ಎಂದು ಅರ್ನಾರ್ಲ್ಡ್ ಹೇಳಿದರು. ಸರಣಿಯ ಬಗ್ಗೆ ಪ್ರತಿಕ್ರಿಯಿಸಿದ ಅರ್ನಾರ್ಲ್ಡ್, ‘‘ಶ್ರೀಲಂಕಾಕ್ಕೆ ಇತಿಹಾಸವನ್ನು ಮರೆಯುವುದೇ ಮೊದಲ ಸವಾಲಾಗಿದೆ. ಶ್ರೀಲಂಕಾದ ಬಲಿಷ್ಠ ತಂಡಕ್ಕೂ ಭಾರತದಲ್ಲಿ ಆಡುವುದು ಅತ್ಯಂತ ಕಷ್ಟವಾಗುತ್ತದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News