ಶೀಘ್ರವೇ ಸೌದಿ ದೊರೆಯಿಂದ ಪುತ್ರನಿಗೆ ಪಟ್ಟಾಭಿಷೇಕ?

Update: 2017-11-18 04:47 GMT

ಲಂಡನ್, ನ. 17: ಅಧಿಕಾರದಿಂದ ಕೆಳಗಿಳಿದು ತನ್ನ ಪುತ್ರ ಹಾಗೂ ಪಟ್ಟದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರನ್ನು ಉತ್ತರಾಧಿಕಾರಿಯನ್ನಾಗಿ ಘೋಷಿಸುವ ಯೋಜನೆಯನ್ನು ಸೌದಿ ಅರೇಬಿಯ ದೊರೆ ಸಲ್ಮಾನ್ ಹೊಂದಿದ್ದಾರೆ ಎಂದು ಬ್ರಿಟನ್‌ನ ಪತ್ರಿಕೆ 'ಡೇಲಿ ಮೇಲ್' ವರದಿ ಮಾಡಿದೆ.

ಇದರ ಬಳಿಕ, ದೊರೆ ಸಲ್ಮಾನ್ ದೇಶದ ಅಲಂಕಾರಿಕ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ ಎಂದು ಸೌದಿ ರಾಜಕುಟುಂಬಕ್ಕೆ ನಿಕಟವಾಗಿರುವ ಮೂಲವೊಂದನ್ನು ಉಲ್ಲೇಖಿಸಿ ಪತ್ರಿಕೆ ಹೇಳಿದೆ.

'ಯಾವುದಾದರೂ ನಾಟಕೀಯ ಬೆಳವಣಿಗೆಗಳು ಸಂಭವಿಸದಿದ್ದರೆ' ಮುಂದಿನ ವಾರ ಈ ಯೋಜನೆ ಜಾರಿಗೆ ಬರುವ ಸಾಧ್ಯತೆಯಿದೆ ಎಂದು ಅದು ಹೇಳಿಕೊಂಡಿದೆ.

 ಅಧಿಕಾರ ಹಸ್ತಾಂತರ ಮುಕ್ತಾಯಗೊಂಡ ಬಳಿಕ, ನೂತನ ದೊರೆ ಇರಾನ್ ಜೊತೆಗಿನ ಶತ್ರುತ್ವಕ್ಕೆ ತಾರ್ಕಿಕ ಅಂತ್ಯವೊಂದನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಿದ್ದಾರೆ ಹಾಗೂ ಇದರಲ್ಲಿ ಯುದ್ಧ ಸಾಧ್ಯತೆಯೂ ಸೇರಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News