ಹಾಂಕಾಂಗ್ ಓಪನ್: ಹಿಂದೆ ಸರಿದ ಶ್ರೀಕಾಂತ್

Update: 2017-11-18 18:37 GMT

ಹೊಸದಿಲ್ಲಿ, ನ.18: ಚೀನಾ ಓಪನ್‌ನಿಂದ ಹೊರಗುಳಿದಿದ್ದ ಕಿಡಂಬಿ ಶ್ರೀಕಾಂತ್ ಮುಂದಿನ ವಾರ ಆರಂಭವಾಗಲಿರುವ ಹಾಂಕಾಂಗ್ ಸೂಪರ್ ಸರಣಿಯಿಂದಲೂ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ‘‘ಶ್ರೀಕಾಂತ್ ಈಗ ಚೇತರಿಸಿಕೊಂಡಿದ್ದು, ಅವರ ಗಾಯ ಗುಣಮುಖವಾಗಿದೆ. ಆದರೆ, ಅವರು ಟೂರ್ನಮೆಂಟ್‌ನಲ್ಲಿ ಆಡುವ ಮೊದಲು ನೂರು ಪ್ರತಿಶತ ಫಿಟ್ ಇರುವುದನ್ನು ನಾವು ಬಯಸುತ್ತೇವೆ. ಅವರು 90 ಶೇ. ಚೇತರಿಸಿಕೊಳ್ಳದ ಕಾರಣ ಅವರಿಗೆ ಇನ್ನೂ ಒಂದು ವಾರ ವಿಶ್ರಾಂತಿ ನೀಡಲು ಬಯಸಿದ್ದೇವೆ’’ ಎಂದು ಭಾರತದ ಫಿಸಿಯೋ ಸಿ.ಕಿರಣ್ ಹೇಳಿದ್ದಾರೆ. ವೈದ್ಯರು ವಿಶ್ರಾಂತಿ ಪಡೆಯಲು ಸಲಹೆ ನೀಡಿದ ಕಾರಣ 25ರ ಹರೆಯದ ಶ್ರೀಕಾಂತ್ ಈಗ ಶಾಂೈನಲ್ಲಿ ನಡೆಯುತ್ತಿರುವ ಚೀನಾ ಓಪನ್ ಸರಣಿಯಿಂದ ದೂರ ಉಳಿದಿದ್ದಾರೆ. ಈ ವರ್ಷ ನಾಲ್ಕು ಸೂಪರ್ ಸರಣಿ ಪ್ರಶಸ್ತಿ ಜಯಿಸಿರುವ ಶ್ರೀಕಾಂತ್ ಪ್ರಸ್ತುತ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್‌ನಲ್ಲಿ ಎರಡನೆ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News