ಮೊದಲ ಟೆಸ್ಟ್: ಶ್ರೀಲಂಕಾ 294 ರನ್‌ಗೆ ಆಲೌಟ್

Update: 2017-11-19 07:45 GMT

 ಕೋಲ್ಕತಾ, ನ.19: ಹಿರಿಯ ಸ್ಪಿನ್ ಬೌಲರ್ ರಂಗನ ಹೆರಾತ್ ಅರ್ಧಶತಕದ ಸಾಹಸದಿಂದ ಶ್ರೀಲಂಕಾ ತಂಡ ಭಾರತ ವಿರುದ್ಧ ಇಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 294 ರನ್ ಗಳಿಸಿ ಆಲೌಟಾಗಿದೆ. 122 ರನ್ ಮುನ್ನಡೆ ಪಡೆಯಲು ಯಶಸ್ವಿಯಾಗಿದೆ.
ನಾಲ್ಕನೆ ದಿನವಾದ ರವಿವಾರ 4 ವಿಕೆಟ್‌ಗಳ ನಷ್ಟಕ್ಕೆ 165 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಶ್ರೀಲಂಕಾ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ಹೆರಾತ್ ಆಸರೆಯಾದರು. ಭಾರತದ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಹೆರಾತ್ 105 ಎಸೆತಗಳಲ್ಲಿ 9 ಬೌಂಡರಿ ಸಹಿತ 67 ರನ್ ಗಳಿಸಿ ತಂಡದ ಮೊತ್ತವನ್ನು 290ರ ಗಡಿ ದಾಟಿಸಿದರು.
ಇಂದು ಬ್ಯಾಟಿಂಗ್ ಮುಂದುವರಿಸಿದ ದಿನೇಶ್ ಚಾಂಡಿಮಾಲ್ ಹಾಗೂ ನಿರೊಶನ್ ಡಿಕ್ವೆಲ್ಲಾ ಕ್ರಮವಾಗಿ 28 ಹಾಗೂ 35 ರನ್ ಗಳಿಸಿ ಔಟಾಗಿದ್ದಾರೆ.
ಭಾರತ ಪರ ಭುವನೇಶ್ವರ ಕುಮಾರ್(4-88) ಹಾಗೂ ಮುಹಮ್ಮದ್ ಶಮಿ(4-100) ತಲಾ 4 ವಿಕೆಟ್‌ಗಳನ್ನು ಕಬಳಿಸಿದರೆ, ಉಮೇಶ್ ಯಾದವ್(2-79) 2 ವಿಕೆಟ್ ಉಡಾಯಿಸಿದರು.
ಭಾರತ ಮೊದಲ ಇನಿಂಗ್ಸ್‌ನಲ್ಲಿ 172 ರನ್ ಗಳಿಸಿ ಆಲೌಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News