ಭ್ರಷ್ಟಾಚಾರ ಆರೋಪ: ಪೊಲೀಸರಿಂದ ಇಸ್ರೇಲ್ ಪ್ರಧಾನಿ ನೆತನ್ಯಾಹು ವಿಚಾರಣೆ

Update: 2017-11-19 16:58 GMT

ಜೆರುಸಲೇಂ,ನ.19: ಎರಡು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿ ಇಸ್ರೇಲ್ ಪೊಲೀಸರು ರವಿವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ರವಿವಾರ ಪ್ರಶ್ನಿಸಿದ್ದಾರೆಂದು ಮಾಧ್ಯಮ ವರದಿಗಳು ತಿಳಿಸಿವೆ.

  ಇಸ್ರೇಲಿ ಉದ್ಯಮಿ ಹಾಗೂ ಹಾಲಿವುಡ್ ನಿರ್ಮಾಪಕ ಅರ್ನಾನ್ ಮೆಲ್ಕಾನ್ ಸೇರಿದಂತೆ ತನ್ನ ಶ್ರೀಮಂತ ಬೆಂಬಲಿಗರಿಂದ ನೆತನ್ಯಾಹು ಅವರು ಐಶಾರಾಮಿ ಉಡುಗೊರೆಗಳನ್ನು ಸ್ವೀಕರಿಸಿದ್ದರೆಂದು ಆರೋಪಿಸಲಾಗಿದೆ.

  ದೀರ್ಘಕಾಲದ ಸ್ನೇಹಿತನಾದ ಮಿಲ್ಕಾನ್, ದುಬಾರಿ ಸಿಗಾರ್‌ಗಳ ಪೆಟ್ಟಿಗೆಗಳು ಹಾಗೂ ಸಾವಿರಾರು ಡಾಲರ್ ವೌಲ್ಯದ ಸೊತ್ತುಗಳನ್ನು ನೆತನ್ಯಾಹು ಅವರಿಗೆ ಕಳುಹಿಸಿಕೊಟ್ಟಿದ್ದರು.

ಇಸ್ರೇಲ್‌ನ ಜನಪ್ರಿಯ ಪತ್ರಿಕೆ ‘ಯೆಡಿಯೊಟ್ ಅಹರೊನೊಟ್’ನಲ್ಲಿ ತನಗೆ ಅನುಕೂಲಕರವಾದ ವರದಿಯನ್ನು ಪ್ರಕಟಿಸುವಂತೆ ಪ್ರಕಾಶಕರ ಜೊತೆ ರಹಸ್ಯ ಒಪ್ಪಂದ ಕುದುರಿಸಿದ ಆರೋಪಕ್ಕೆ ಸಂಬಂಧಿಸಿಯೂ ತನಿಖಾಧಿಕಾರಿಯು ನೆತನ್ಯಾಹು ಅವರನ್ನು ಪ್ರಶ್ನಿಸಿರುವುದಾಗಿ ಮೂಲಗಳು ತಿಳಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News