ನೇಪಾಳದ ಮಾಜಿ ಪ್ರಧಾನಿಯ ಪುತ್ರ ನಿಧನ
Update: 2017-11-19 22:33 IST
ಕಠ್ಮಂಡು,ನ.19: ನೇಪಾಳದ ಮಾಜಿ ಪ್ರಧಾನಿ, ಸಿಪಿಎನ್ (ಮಾವೊವಾದಿ) ಪಕ್ಷದ ವರಿಷ್ಠ ಪ್ರಚಂಡ ಅವರ ಏಕೈಕ ಪುತ್ರ ಪ್ರಕಾಶ್ ದಹಾಲ್ ರವಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇಂದು ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಮೂವತ್ತರ ಹರೆಯದ ಪ್ರಕಾಶ್ ದಹಾಲ್, ಕಠ್ಮಂಡುವಿನಲ್ಲಿರುವ ನೊರ್ವಿಕ್ ಇಂಟರ್‌ನ್ಯಾಶನಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರೆಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಕಾಶ್ ಅವರು ತನ್ನ ತಂದೆ ಪ್ರಚಂಡರಿಗೆ ಕಾರ್ಯದರ್ಶಿಯಾಗಿದ್ದರು ಹಾಗೂ ಸಿಪಿಎನ್(ಮಾವೊವಾದಿ) ಪಕ್ಷದ ಕೇಂದ್ರೀಯ ಸಮಿತಿಯ ಸದಸ್ಯರೂ ಆಗಿದ್ದರು.