ಪೂರ್ವ ಸಿರಿಯದಲ್ಲಿ ಬಾಂಬ್ ದಾಳಿ; 20 ಮಂದಿ ಮೃತ್ಯು

Update: 2017-11-19 17:12 GMT

ಬೈರೂತ್,ನ.19: ಪೂರ್ವ ಸಿರಿಯದಲ್ಲಿ ಶುಕ್ರವಾರ ಶಂಕಿತ ಐಸಿಸ್ ಉಗ್ರರು ನಡೆಸಿದ ಕಾರ್ ಬಾಂಬ್ ದಾಳಿಯಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ದೇರ್ ಅಲ್-ರೆರ್ ನಗರ ಸಮೀಪ ನಿರ್ವಸಿತ ಕುಟುಂಬಗಳು ವಾಸವಾಗಿದ್ದ ಸ್ಥಳದಲ್ಲಿ ಕಾರ್‌ಬಾಂಬ್ ಸ್ಫೋಟ ನಡೆದಿರುವುದಾಗಿ ಸಾನಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಸಿರಿಯ ಸರಕಾರದ ನಿಯಂತ್ರಣದಲ್ಲಿರುವ ದೇರ್ ಅಲ್-ರೆರ್ ನಗರದ ದಕ್ಷಿಣ ಭಾಗದಲ್ಲಿರುವ ಅಲ್-ಜಾಫ್ರಾ ಪ್ರದೇಶದಲ್ಲಿ ಬಾಂಬ್ ದಾಳಿ ನಡೆದಿರುವುದಾಗಿ ವರದಿಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News