ಪ್ರಧಾನಿ ವಿರುದ್ಧ ಎತ್ತುವ ಕೈಯನ್ನು, ಬೆರಳನ್ನು ಮುರಿಯುತ್ತೇವೆ, ಕತ್ತರಿಸುತ್ತೇವೆ

Update: 2017-11-21 07:18 GMT

ಬಿಹಾರ, ನ.21: “ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಮುನ್ನಡೆಸುವ ಸಂದರ್ಭ ಭಾರೀ ವಿರೋಧಗಳನ್ನು , ತೊಂದರೆಗಳನ್ನು ಎದುರಿಸಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಯಾರಾದರೂ ‘ಕೈ ಅಥವಾ ಬೆರಳು ಎತ್ತಿದರೆ’ ಅದನ್ನು ಮುರಿಯಲಾಗುವುದು ಹಾಗು ಕತ್ತರಿಸಲಾಗುವುದು” ಎಂದು ಬಿಹಾರದ ಬಿಜೆಪಿ ಅಧ್ಯಕ್ಷ ಹಾಗು ಸಂಸದ ನಿತ್ಯಾನಂದ ರೈ ಹೇಳಿರುವುದು ವಿವಾದವನ್ನು ಸೃಷ್ಟಿಸಿದೆ.

ವೈಶ್ಯ ಹಾಗು ಕಾನು ಸಮುದಾಯಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ಆರಂಭದ ದಿನಗಳಿಂದ ಪ್ರಧಾನಮಂತ್ರಿಯಾದವರೆಗಿನ ಬದಲಾವಣೆಗಳನ್ನು ವಿವರಿಸಿದರು. ಇದೇ ಸಂದರ್ಭ ಅವರು “ಪ್ರಧಾನಿಯವರ ವಿರುದ್ಧ ಎತ್ತುವ ಯಾವುದೇ ಕೈ ಅಥವಾ ಬೆರಳನ್ನು ನಾವು ತುಂಡರಿಸುತ್ತೇವೆ  ಹಾಗು ಅಗತ್ಯ ಬಿದ್ದರೆ ಕತ್ತರಿಸುತ್ತೇವೆ” ಎಂದು ಹೇಳಿದ್ದಾರೆ.

ಈ ಬಗ್ಗೆ ರೈಯವರನ್ನು ಪತ್ರಕರ್ತರು ಪ್ರಶ್ನಿಸಿದ್ದು, ದೇಶದ ಹೆಮ್ಮೆ ಹಾಗು ಭದ್ರತೆಯ ವಿರುದ್ಧ ಇರುವವರೊಂದಿಗೆ ನಾವು ಕಠಿಣವಾಗಿ ವ್ಯವಹರಿಸುತ್ತೇವೆ ಎನ್ನುವುದನ್ನು ತಿಳಿಸಲು ನಾನು ಕೈ ಹಾಗು ಬೆರಳು ಕತ್ತರಿಸುವ ಹೇಳಿಕೆ ನೀಡಿದ್ದೇನೆ” ಎಂದು ಸಮಜಾಯಿಷಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News