ಐಸಿಸ್ ನಿರ್ಮೂಲ: ರೂಹಾನಿ ಘೋಷಣೆ

Update: 2017-11-21 16:56 GMT

ಬೆರೂತ್, ನ. 21: ಐಸಿಸ್ ಭಯೋತ್ಪಾದಕ ಸಂಘಟನೆಯನ್ನು ನಿರ್ಮೂಲಗೊಳಿಸಲಾಗಿದೆ ಎಂಬುದಾಗಿ ಇರಾನ್ ಅಧ್ಯಕ್ಷ ಹಸನ್ ರೂಹಾನಿ ಮಂಗಳವಾರ ಸರಕಾರಿ ಟಿವಿಯಲ್ಲಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.

ಅದೇ ವೇಳೆ, ದೇಶದ ಸರ್ವೋಚ್ಛ ನಾಯಕನಿಗೆ ಮಂಗಳವಾರ ಕಳುಹಿಸಿದ ಸಂದೇಶವೊಂದರಲ್ಲಿ, ಐಸಿಸನ್ನು ಕೊನೆಗಾಣಿಸಲಾಗಿದೆ ಎಂಬುದಾಗಿ ಇರಾನ್‌ನ ರೆವಲೂಶನರಿ ಗಾರ್ಡ್ಸ್‌ನ ಹಿರಿಯ ಕಮಾಂಡರ್ ಮೇಜರ್ ಜನರಲ್ ಕಾಸಿಮ್ ಸುಲೈಮಾನಿ ಘೋಷಿಸಿದ್ದಾರೆ.

ಸುಲೈಮಾನಿ ರೆವಲೂಶನರಿ ಗಾರ್ಡ್ಸ್‌ನ ಘಟಕ ಖುದ್ಸ್ ಫೋರ್ಸ್‌ನ ಕಮಾಂಡರ್ ಆಗಿದ್ದಾರೆ. ಅದು ಇರಾನ್‌ನ ಗಡಿಗಳ ಹೊರಗೆ ಇರಾಕ್ ಮತ್ತು ಸಿರಿಯಗಳಲ್ಲಿರುವ ಐಸಿಸ್ ವಿರುದ್ಧ ಕಾರ್ಯಾಚರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News