ಪರಿಸರ ಮಾಲಿನ್ಯ: ಪಂಜಾಬ್ ಸಿಎಂನಿಂದ ಪಂಜಾಬ್ ಸಿಎಂಗೆ ಪ್ರಾದೇಶಿಕ ಒಪ್ಪಂದ ಪ್ರಸ್ತಾಪ

Update: 2017-11-21 17:00 GMT

ಲಾಹೋರ್, ನ. 21: ಹೊಗೆ ಮತ್ತು ಪರಿಸರ ಮಾಲಿನ್ಯವನ್ನು ನಿಭಾಯಿಸುವುದಕ್ಕೆ ಸಂಬಂಧಿಸಿ ‘ಪ್ರಾದೇಶಿಕ ಸಹಕಾರ ಒಪ್ಪಂದ’ವೊಂದನ್ನು ಮಾಡಿಕೊಳ್ಳುವ ಪ್ರಸ್ತಾಪವನ್ನು ಪಾಕಿಸ್ತಾನದ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಶೆಹ್ಬಾಝ್ ಶರೀಫ್ ಭಾರತೀಯ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್‌ರ ಮುಂದಿಟ್ಟಿದ್ದಾರೆ.

ನವೆಂಬರ್ 19ರಂದು ಅಮರಿಂದರ್ ಸಿಂಗ್‌ಗೆ ಬರೆದ ಪತ್ರದಲ್ಲಿ, ಕಳೆದ ವರ್ಷದಿಂದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಮಾಲಿನ್ಯಕಾರಿ ಹೊಗೆಯ ಸಮಸ್ಯೆಯನ್ನು ಉಭಯ ಪಂಜಾಬ್ ರಾಜ್ಯಗಳ ಜನರು ಎದುರಿಸುತ್ತಿದ್ದಾರೆ ಎಂದು ಶೆಹ್ಬಾಝ್ ಹೇಳಿದ್ದಾರೆ.

‘‘ಈ ಹಿನ್ನೆಲೆಯಲ್ಲಿ, ಹೊಗೆ ಮತ್ತು ಪರಿಸರ ಮಾಲಿನ್ಯವನ್ನು ನಿಭಾಯಿಸುವ ದೃಷ್ಟಿಯಿಂದ ಪ್ರಾದೇಶಿಕ ಸಹಕಾರ ಒಪ್ಪಂದವೊಂದನ್ನು ಹೊಂದುವ ಬಗ್ಗೆ ನಾನು ನಿಮ್ಮ ಅಭಿಪ್ರಾಯ ಕೋರುತ್ತಿದ್ದೇನೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News