ಅಪರಾಧದ ಮಾನದಂಡ ಯಾವುದು?

Update: 2017-11-21 18:36 GMT

ಮಾನ್ಯರೆ,

 ಕರ್ನಾಟಕದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ 2,034 ಅಭ್ಯರ್ಥಿಗಳನ್ನು ಈ ವರ್ಷದ ಫೆ.4ರಂದು ಆಯ್ಕೆ ಮಾಡಲಾಗಿತ್ತು. ಈ ಅಭ್ಯರ್ಥಿಗಳ ದಾಖಲಾತಿ ಗಳನ್ನು ಪರಿಶೀಲಿಸಲು ಕಾಲೇಜು ಶಿಕ್ಷಣ ಆಯುಕ್ತರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಯಿತು. ದಾಖಲಾತಿ ಪರಿಶೀಲನೆ ವೇಳೆ 23 ಅಭ್ಯರ್ಥಿಗಳು ಪಿಎಚ್.ಡಿ ಹಾಗೂ ಎಂ.ಫಿಲ್.ನ ನಕಲಿ ಅಂಕಪಟ್ಟಿ ಸಲ್ಲಿಸಿ ಆಯ್ಕೆಯಾಗಿರುವುದು ಗೊತ್ತಾಯಿತು. ಹುದ್ದೆ ಗಿಟ್ಟಿಸಿಕೊಳ್ಳಲು ವಂಚಿಸಿದ ಈ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪತ್ರಿಕೆಗಳಲ್ಲಿ ಬಂದ ವರದಿ ಓದುವಾಗ ಅನಿಸಿದ್ದು- ನಮ್ಮ ದೇಶದ ಪ್ರಧಾನಿಯೇ ಜಗತ್ತಿನ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಇಲ್ಲದಿರುವ ಎಂಟಾಯರ್ ಪಾಲಿಟಿಕಲ್ ಸಯನ್ಸ್ ಎಂಬ ಶುದ್ಧ ಕಾಲ್ಪನಿಕ ವಿಷಯದಲ್ಲಿ ನಕಲಿ ಬಿಎ ಡಿಗ್ರಿ ಮತ್ತು ಸ್ನಾತಕೋತ್ತರ ಪದವಿ ಹೀಗೆ ಎರಡೆರಡು ನಕಲಿ ಡಿಗ್ರಿ ಪಡೆದು ದೇಶದ ಅತ್ಯುಚ್ಚ ಪದವಿಗೆ ಏರಿದ್ದಾರೆಂದು ಆರೋಪವಿರುವಾಗ ಹಾಗೂ ಅವರದ್ದೇ ಸಂಪುಟದ ಸಚಿವೆ ಸ್ಮತಿ ಇರಾನಿ ನಕಲಿ ವಿದೇಶಿ ಡಿಗ್ರಿ ಹೊಂದಿರುವ ಆರೋಪ ಹೊತ್ತಿರುವಾಗಲೂ ಅವರ ವಿರುದ್ಧ ಉಚ್ಚ ನ್ಯಾಯಾಲಯ ಕೂಡಾ ಯಾವುದೇ ಕ್ರಮ ಕೈಗೊಳ್ಳದಿರುವಾಗ, ಕರ್ನಾಟಕದಲ್ಲಿ ಬಡ ನಿರುದ್ಯೋಗಿಗಳು ನಕಲಿ ಅಂಕ ಪಟ್ಟಿ ಸಲ್ಲಿಸಿ ಹೊಟ್ಟೆಪಾಡಿಗಾಗಿ ಒಂದು ಸಣ್ಣ ನೌಕರಿ ಪಡೆದಿದ್ದು ಕಾನೂನಾತ್ಮಕವಾಗಿ ಅಪರಾಧ ಆಗಿದ್ದರೂ ರಾಜಕಾರಣಿಗಳ ನಕಲಿ ಡಿಗ್ರಿ ಅಥವಾ ನಕಲಿ ಎನ್‌ಕೌಂಟರ್‌ಗಳಿಗೆ ಹೋಲಿಸಿದಾಗ ಅಪರಾಧ ಎನ್ನಿಸುತ್ತಿದೆಯೇ?

-ರಾಮಕೃಷ್ಣ ಕುಲಾಲ್, ಅಶೋಕ್ ನಗರ, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News